ಭಾರತದ ಇತಿಹಾಸದಲ್ಲೇ ಜಾತಿ ನಿಂದನೆ ಕೇಸಿನಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು.
ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ ದಲಿತ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ಬಂಧಿತರಾಗಿದ್ದಂತ 101 ಆರೋಪಿಗಳಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಕೋರ್ಟ್ ಆದೇಶಿಸಿದೆ. ಈ ಮೂಲಕ ಈ ಪ್ರಕರಣ ದೇಶದ ಇತಿಹಾಸದಲ್ಲೇ ಇಷ್ಟು ಜನರಿಗೆ ಒಂದೇ ಬಾರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಮೊದಲು.
ಹತ್ತು ವರ್ಷಗಳ ಹಿಂದೆ, ಅಂದರೆ 2014ರ ಆಗಸ್ಟ್ 28ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಭಾರಿ ಗಲಾಟೆ ನಡೆದಿತ್ತು. ಸಿನಿಮಾ ಮಂದಿರದಲ್ಲಿ ಟಿಕೆಟ್ ವಿಚಾರಕ್ಕೆ ಆರಂಭವಾಗಿದ್ದ ಜಗಳ ಸಂಘರ್ಷಕ್ಕೆ ಕಾರಣವಾಗಿತ್ತು. ಗ್ರಾಮದಲ್ಲಿದ್ದ ಅಸ್ಪ್ರಶ್ಯತೆ ಎಂಬ ಸಾಮಾಜಿಕ ಪಿಡುಗು ಗ್ರಾಮವನ್ನು ಸ್ಮಶಾನವಾಗಿಸಿತ್ತು. ಸವರ್ಣೀಯರಿಂದಾಗಿ ನೊಂದಿದ್ದ ಗ್ರಾಮದ ದಲಿತರು ಬಹಿರಂಗವಾಗಿ ಅಸ್ಫಶ್ಯತೆಯನ್ನು ಖಂಡಿಸಿದ್ದರು. ಈ ನಡುವೆ ಗಂಗಾವತಿಯಲ್ಲಿರುವ ಥಿಯೇಟರ್ನಲ್ಲಿ ಸಿನಿಮಾ ನೋಡಲು ಟಿಕೆಟ್ ಖರೀದಿಸುವ ವಿಚಾರವಾಗಿ ಜಗಳ ಆರಂಭವಾಗಿತ್ತು. ದಲಿತರ ಗುಂಪು ಮತ್ತೊಂದು ಯುವಕರ ಗುಂಪಿನ ಮೇಲೆ ಹಲ್ಲೆ ಮಾಡಿಸಿದೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿತು. ಈ ಸುದ್ದಿಯು ಸವರ್ಣೀಯರ ಆಕ್ರೋಶಕ್ಕೆ ಕಾರಣವಾಗಿ, ದಲಿತರಿರುವ ಪ್ರದೇಶಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಜಗಳ ನಡೆದಿತ್ತು. ಪರಿಣಾಮ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಶಿಕ್ಷೆ ಪ್ರಕಟವಾಗುತ್ತಿದಂತೆ ಆರೋಪಿಗಳ ಕುಟುಂಬಸ್ಥರು ಕಣ್ಣೀರು ಹಾಕಿದರು.
ಈ ಶಿಕ್ಷೆಯನ್ನು ನ್ಯಾಯಾಲಯ ಪರಾಮರ್ಶಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ. ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರಿಗೆ, ಭಯೋತ್ಪಾದಕರಿಗೆ, ಸಮಾಜದ ಶಾಂತಿ ಹಾಳು ಗೇಡುವುತ್ತಿರುವವರಿಗೆ ಸರಳವಾದ ಶಿಕ್ಷೆ ನೀಡುತ್ತಾರೆ, ಜಾತಿ ನಿಂದನೆಗೆ ಈ ಪ್ರಮಾಣದ ಶಿಕ್ಷೆ ಸರಿಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಏಕೆಂದರೆ ಈ ಜಾತಿ ನಿಂದನೆ ಕೇಸುಗಳು ಬಹಳಷ್ಟು ದುರುಪಯೋಗ ಆಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾಯಿದೆಯ ಬಗ್ಗೆ ಸರ್ಕಾರಗಳು ಚಿಂತಿಸಬೇಕು.ಸುಪ್ರೀಂ ಕೋರ್ಟ್ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈ ಕಾಯಿದೆಯ ಬಗ್ಗೆ ಮಾರ್ಪಡುವಂತೆ ಸೂಚನೆ ನೀಡಿತ್ತು ಆದರೆ ಕೇಂದ್ರ ಸರ್ಕಾರ ಕಾಯಿದೆಯ ಯಥಾ ಸ್ಥಿತಿಯನ್ನು ಕಾಪಾಡಿಕೊಂಡಿದೆ.