logo

ಮದ್ದೂರು ತಾಲ್ಲೂಕು ಹಿರಿಯ ಕಲಾವಿದರ ಸಂಘದಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ

ಮದ್ದೂರು ತಾಲ್ಲೂಕು ರಂಗಭೂಮಿ ಹಿರಿಯ ಕಲಾವಿದರ ಸಂಘವು ಇದೇ ಅಕ್ಟೋಬರ್ 27 ರ ಭಾನುವಾರ ಬೆಳಿಗ್ಗೆ 10: 30 ಘಂಟೆಗೆ ಮದ್ದೂರು ತಾಲ್ಲೂಕಿನ ಹಳೆ ಬಸ್ ಸ್ಟಾಂಡ್ ಆವರಣದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸಲಾಗುತ್ತಿದ್ದು ಇದಕ್ಕೆ ಕನ್ನಡ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘದವರನ್ನು ಪ್ರೋತ್ಸಾಹಿಸಬೇಕೆಂದು ಸಂಘದ ಅಧ್ಯಕ್ಷರಾದ ಶ್ರೀ ಮಹಾದೇವುರವರು ಕೇಳಿಕೊಂಡಿದ್ದಾರೆ.
ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕದಲೂರು ಉದಯ್ ಅವರು ಅಂದು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಮದ್ದೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಾರದ ಶ್ರೀ ಚಲುವರಾಜುರವರು ಮುಖ್ಯ ಅತಿಥಿಯಾಗಿದ್ದು ಹಾಗು ಸಂಘದ ಪ್ರೋತ್ಸಾಹಕರಾದ ಶ್ರೀ ಎಂ.ಜಿ ಶ್ರೀಕಂಠಯ್ಯನವರು ಉದ್ಘಾಟನಾ ಸಮಾರಂಭವನ್ನು ನಡೆಸಿಕೊಡುತ್ತಿದ್ದಾರೆ.

ಈ ಸಮಾರಂಭದ ಅತಿಥಿಗಳಾಗಿ ಮದ್ದೂರು ತಾಲೂಕಿನ ತಹಶಿಲ್ದಾರರಾದ ಶ್ರೀಯುತ. ಶ್ರೀಮತಿ ಸ್ಮಿತಾರಾಮುರವರು, ಸರ್ಕಲ್ ಇನ್ಸ್ಪೆಕ್ಟರ್ ಶ್ರೀ.ಶಿವಕುಮಾರ್ ರವರು, ಪುರಸಭೆಯ ಮುಖ್ಯಧಿಕಾರಿಗಳಾದ ಶ್ರೀಮತಿ ಮೀನಾಕ್ಷಿ ಎಂ ರವರು, ಶಿಕ್ಷಣಾಧಿಕಾರಿಗಳಾದ ಕಾಳೀರಯ್ಯರವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ‌. ಡಿ .ಪಿ ಸ್ವಾಮಿರವರು ಹಾಗು ಡಾ. ದಿವಾಕರ. ಡಿ ಕೊತ್ತನಹಳ್ಳಿಯವರು ಭಾಗವಹಿಸುತ್ತಿದ್ದು ಕನ್ನಡ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

7
3625 views