The Karnataka PWD minister has announced that he will leave Hinduism and accept Buddhism.
ಕರ್ನಾಟಕ ಸರ್ಕಾರದ PWD ಇಲಾಖೆಯ ಸಚಿವರಾದ ಎಚ್. ಸಿ. ಮಹಾದೇವಪ್ಪ ಅವರು ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಜಾತಿಯತೆ, ಅಸ್ಪೃಶ್ಯತೆ ಜಾಸ್ತಿ ಇದೆ. ಇಲ್ಲಿ ಮಾನವರು ಎಲ್ಲಾ ಸಮಾನರು ಎಂಬ ಭಾವನೆಯಿಲ್ಲ. ಇಲ್ಲಿ ಬ್ರಾಹ್ಮಣ್ಯದ ಪಾರೂಪತ್ಯವಿದೆ , ಇಗಿರುವ ಸಂವಿಧಾನದಿಂದ ದಲಿತರು ಶೂದ್ರರು ಗೌರವದಿಂದ ಬಾಳುತ್ತಿದ್ದೇವೆ ಇದಕ್ಕೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಭೀಮರಾವ್ ಅಂಭೆಡ್ಕರ್ ಅವರಿಗೆ ಸದಾ ಕೃತಜ್ಞರಾಗಿರಬೇಕು ಎಂದರು.
ಆದರೆ ಅವರು ನಾವು ಕೇಳಿದ ಒಂದು ಪ್ರಶ್ನೆಗೆ ಉತ್ತರಿಸಲಿಲ್ಲ. ಬೌದ್ಧ ಧರ್ಮ ಸ್ವೀಕರಿಸಿದ ಮೇಲೆ ನೀವು ಹೇಳಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವಾ?
ಮತ್ತು ಈಗಿರುವ ದಲಿತರ ಎಲ್ಲಾ ಸೌಲಭ್ಯಗಳನ್ನು ತಾವು ತೊರೆಯುತ್ತೇರೆಯೇ ಎಂದಾಗ ಅವರು ಉತ್ತರಿಸದೆ ಸುಮ್ಮನೆ ಹೋರಟುಹೋದರು.
ಬಹುಶಃ ಈ ವಿಷಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಯಾಗಬೇಕು.