logo

ಬೆಳಗಾವಿ:ಬೈಲಹೊಂಗಲದ 7 ತಿಂಗಳ ಮಗುವಿಗೆ ಬೇಕಾಗಿದೆ ಚಿಕಿತ್ಸೆಗೆ ನೆರವು


ದಯವಿಟ್ಟು ಈ 7 ತಿಂಗಳ ಹೆಣ್ಣು ಮಗುವಿನ ಚಿಕಿತ್ಸೆಗೆ ನೆರವು ನೀಡಿ, ಈ ಮಗುವನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ.

ಬಹಳಷ್ಟು ಸಂದರ್ಭದಲ್ಲಿ ನಿಮ್ಮ ಮುಂದೆ ಅಂಗಲಾಚಿ ಬಹಳಷ್ಟು ಮಕ್ಕಳು ಮತ್ತು ನೊಂದವರ ಪರವಾಗಿ ಅವರ ಚಿಕಿತ್ಸೆಗೆ ನಿಮ್ಮ ಮುಂದೆ ನಾವು ಕೈ ಚಾಚಿದಾಗ ನಮ್ಮನ್ನು ಬಾಚಿ ತಬ್ಬಿ ನಿಮ್ಮ ಕೈಲಾದ ಸಹಾಯವನ್ನು ಮಾಡಿದ್ದಿರಿ. ಇಂದು ಒಬ್ಬ ಮಹಿಳಾ ಸಹೋದರಿಯ 7 ತಿಂಗಳ ಪುಟ್ಟ ಮಗಳು ಸರಿಯಾದ ಚಿಕಿತ್ಸೆ ಸಿಗದೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಅವಳಿಗೆ ಚಿಕ್ಸತೆ ಸಿಗಬೇಕೆಂದರೆ ನಿಮ್ಮ ನೆರವಿನ ಅವಶ್ಯಕತೆ ಇದೆ. ಮೆದುಳು ತೊಂದರೆಯಿಂದ ಬಳಲುತ್ತಿರುವ 7 ತಿಂಗಳ ಮಗುವಿನ ನೆರವಿಗೆ ನೀವು ಬರುತ್ತೀರಿ ಎಂಬ ನಂಬಿಕೆ ನನ್ನದು ದಯವಿಟ್ಟು ಕೈಬಿಡಬೇಡಿ ನಿಮ್ಮ ಕೈಲಾದ ಸಹಾಯವನ್ನು ಮಾಡಿ.

ಕಡೇಪಕ್ಷ ನಿಮ್ಮ ತಿಳಿದವರಿಂದ ಸಹಾಯ ಮಾಡಿ ಇದು ನಮ್ಮ ಕಳಕಳಿಯ ಮನವಿ.

ಇದೊಂದು ತುರ್ತು ಸಂದೇಶ

ಸಂದೇಶದ ದಿನಾಂಕ: 13-10-2024

ನಮ್ಮ ಸಹೋದರಿಯೊಬ್ಬರ 7 ತಿಂಗಳ ಹೆಣ್ಣುಮಗುವೊಂದು ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದು ಇವರಿಗೆ ಸಾಕಷ್ಟು ಸಾಲ ಮಾಡಿ ಹಣವನ್ನು ಖರ್ಚು ಮಾಡಿರುವ ಇವರು ಕೆಲವು ದಿವಸದ ಹಿಂದೆ ಬೆಳಗಾವಿಯ ಕೆ ಎಲ್ ಈ ಆಸ್ಪತ್ರೆಯಲ್ಲಿ ಅಡ್ಮಿಟ್ ಇದ್ದು, ಆ ಆಸ್ಪತ್ರೆಯವರು ಈಗ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಹೇಳಿರುವ ಕಾರಣ ಅಲ್ಲಿ ಸುಮಾರು 5 ಲಕ್ಷ್ ಖರ್ಚು ಆಗುತ್ತದೆ ಎಂದು ಅಲ್ಲಿಯ ವೈದ್ಯರು ತಿಳಿಸಿದ್ದಾರೆ.

ಸರಿಯಾದ ಚಿಕಿತ್ಸೆ ಇಲ್ಲದೆ ಮಗುವಿನ ಸ್ಥಿತಿ ಬಹಳ ಗಂಭೀರವಾಗಿದೆ ಈಗ ಆ ಮಗುವಿಗೆ ನಿಮ್ಮ ನೆರವಿನ ಅವಶ್ಯಕತೆ ಇದೆ.

ದಯವಿಟ್ಟು ನಿಮ್ಮ ಸಹಾಯವನ್ನು ಕೋರುತ್ತೇವೆ ಹೆಚ್ಚಿನ ಮಾಹಿತಿಗೆ ಮಗುವಿನ ತಂದೆ, ತಾಯಿಯ ಮೊಬೈಲ್ ನಂಬರ್ ನಿಮಗೆ ನೀಡಿರುತ್ತೇನೆ.
+918431844396

ಮಗುವಿನ ತಾಯಿಯ ಅಕೌಂಟ್ ನಂಬರ್: 89060483268
Ifsc: KVGB0002101
ಮಗುವಿನ ಹೆಸರು: ಐಯ್ಜಲ್,
ಬ್ಯಾಂಕ್ ಹೆಸರು: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್.
ಬ್ರಾಂಚ್: ಬೈಲಹೊಂಗಲ,
ಫೋನ್ ಪೇ: 8431844396
ಮಗುವಿನ ತಂದೆ: ಬಾಬುಲಾಲ್ ಬಾಗೇವಾಡಿ.

ಆತ್ಮೀಯರೇ ಇಲ್ಲಿಯವರೆಗೆ ನಾವು ನಿಮ್ಮಲ್ಲಿ ಕೈನೀಡಿ ಬೇಡಿದಾಗ ಎಂದು ನೀವು ಇಲ್ಲ ಎಂದಿಲ್ಲ. ಈ 7 ತಿಂಗಳ ಮಗುವಿನ ನೆರವಿಗೆ ದಯವಿಟ್ಟು ಬಂದು ನಿಮ್ಮ ಕೈಲಾದ ಸಹಾಯ ಮಾಡಬೇಕೆಂದು ಆತ್ಮೀಯವಾಗಿ ಕೋರಿಕೊಳ್ಳುತ್ತೇನೆ,

112
5622 views