logo

ರಾಜ್ಯದ ಅತಿದೊಡ್ಡ.. ಶಿವಮೊಗ್ಗದ ಶಿವಮೊಗ್ಗದ ದಸರಾ ಮಹೋತ್ಸವಕ್ಕೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರಿಂದ ಚಾಲನೆ....

ರಾಜ್ಯದ ಎರಡನೆಯ ಅತಿದೊಡ್ಡ ದಸರಾ ಮಹೋತ್ಸವಕ್ಕೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರಿಂದ ಚಾಲನೆ.... ಶಿವಮೊಗ್ಗ ಮಹಾನಗರ ಪಾಲಿಕೆ ನಗರದ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ನಾಡ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತವಾಗಿ.. ಶಾಸಕರಾದ ಶ್ರೀ ಚನ್ನಬಸಪ್ಪ ಅವರೊಂದಿಗೆ ಚಾಲನೆ ನೀಡಿದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು.
ನಮ್ಮ ನಾಡಿನ ಅತ್ಯಂತ ಸಾಂಸ್ಕೃತಿಕ ಶ್ರೀಮಂತಿಕೆ ತುಂಬಿದ ವೈಭವದ ನಾಡಹಬ್ಬ ದಸರಾ ನಮ್ಮ ರಾಜ್ಯದ ಒಂದು ಹೆಮ್ಮೆಯ ಪ್ರತೀಕ. ನಾಡಿನ ಶ್ರೀಮಂತ ಸಾಂಸ್ಕೃತಿಕ ಗತವೈಭವವನ್ನು ವಿಶ್ವಕ್ಕೆ ಪರಿಚಯಿಸಿದ ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆಯು ಹೌದು. ಹತ್ತು ದಿನಗಳ ಕಾಲ ಅತ್ಯಂತ ವೈಭವಪೂರಿತವಾಗಿ ಈ ವಿಶೇಷ ಹಬ್ಬವನ್ನು ಆಚರಿಸಲಾಗುತ್ತದೆ. ನವದುರ್ಗಿಯರನ್ನು ಪೂಜಿಸಿ ಆರಾಧಿಸುವ ಪರಂಪರೆ ಇದರಲ್ಲಿ ಅಡಕವಾಗಿದೆ. ಬನ್ನಿ ಸರ್ವರೂ ಈ ಹಬ್ಬದಲ್ಲಿ ಮಿಂದೇಳೋಣ, ಹಬ್ಬದ ಸ್ವಾದವನ್ನು ಉಣಬಡಿಸೋಣ.

ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

0
105 views