
ಇಂಡಿ: ನ್ಯಾಷನಲ್ ಅಪ್ನಿ ಪಾರ್ಟಿ ವತಿಯಿಂದ ಸುಡ್ಡಿ ಗೋಷ್ಟಿ ಇಂದಿನ ರಾಜಕೀಯ ವಿದ್ಯಾಮಾನಗಳ ಕುರಿತು ಕಾಂಗ್ರೆಸ್ ,ಬಿಜೆಪಿ,ಜೆ ಡಿ ಎಸ್ ಪಕ್ಷಗಳ ವಿರುದ್ದ ಹರಿಹಾಯ್ದ ರಾಜ್ಯ ಅಧ್ಯಕ್ಷ ಫಿರೋಜ್. ಬಿ.ಎಸ್
ಇಂಡಿ : ಕರ್ನಾಟಕದಲ್ಲಿ ರಾಜಕೀಯ ಮೇಲಾಟಗಳು ಏನು ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತು. ಹಣ, ಹೆಂಡ,ಅಧಿಕಾರಿದ ಉಪಯೋಗದಿಂದ ರಾಜ್ಯಕೀಯ ಏರಿಳಿತವನ್ನು, ದೊಂಬರಾಟವನ್ನು, ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ ಜವಾಬ್ದಾರಿ ರಾಷ್ಟ್ರೀಯ, ರಾಜ್ಯದ ಆಡಳಿತ ಪಕ್ಷಗಳು ಜನರ ಹಿತ ಕಾಪಾಡುವಲ್ಲಿ ವೈಫಲ್ಯ ಕಂಡಿವೆ ಎಂದು ನ್ಯಾಷನಲ್ ಅಪನಿ ಪಕ್ಷದ ರಾಜ್ಯದ ಅಧ್ಯಕ್ಷ ಪಿರೋಜ್ ಬಿ ಎಸ್ ಕಿಡಿಕಾರಿದರು.
ಶುಕ್ರವಾರ ಪಟ್ಟಣದ ಖಾಸಗಿ ಹೋಟೆಲನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು..? ಯಾರನ್ನು..? ಯಾರಿಗೆ ಮುಗಿಸಬೇಕೋ..! ಉಳಿಸಬೇಕೋ..! ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರಾಜಕಾರಣ ಅರಾಜಕತೆಯಲ್ಲಿದೆ. ಆದರೆ ನ್ಯಾಷನಲ್ ಅಪನಿ ಪಕ್ಷ ರಾಜ್ಯದ ಜನರ ಹಿತದೃಷ್ಟಿಯಿಂದ ಕಾಯಕ ಮಾಡುವ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಪಕ್ಷವಾಗಿದೆ. ಈಗಾಗಲೇ ರಾಜ್ಯದ ಹಲವು ಭಾಗದಲ್ಲಿ ಪ್ರವಾಸ ಮಾಡಿದ್ದು ಜನರ ನೋವು, ಸಮಸ್ಯೆ ಆಲಿಸುವ ಕಾಯಕ ಮಾಡಿದ್ದು, ಸ್ಪಂದಿಸುವ ಕಾರ್ಯ ಮಾಡಿದ್ದೆವೆ. ಅದಕ್ಕಾಗಿ ರಾಜ್ಯದಲ್ಲಿ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ-ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಚುನಾವಣೆ ರಣಕಹಳೆ ಮೂಳಗಿಸುತ್ತೆವೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ನ್ಯಾಷನಲ್ ಅಪನಿ ಪಕ್ಷ ಬದ್ದವಾಗಿದೆ. ಪಕ್ಷದ ಚಿಹ್ನೆ ಸೇಬು ಹಣ್ಣಾಗಿದ್ದು ಆರೋಗ್ಯಯುತ ಕರ್ನಾಟಕ, ಬಲಿಷ್ಠ ಕರ್ನಾಟಕಕ್ಕಾಗಿ ಏಕೈಕ ಪಕ್ಷವಾಗಿದೆ. ಹಾಗಾಗಿ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಅಪನಿ ಪಕ್ಷದ ಧ್ಯೆಯಗಳನ್ನು ಮೆಚ್ಚಿಕೊಂಡು ಬೆಂಬಲಿಸುತ್ತಾರೆ ಎಂಬ ವಿಸ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಹುಸೇನ್ ಪೀರಾ ದೊಡ್ಡಮನಿ, ಗುರುನಾಥ ರೆಡ್ಡಿ, ದೇವಿಕಾಗೌಡ, ಶಿವಪ್ಪ ಬೆವಿನಗಿಡ ಉಪಸ್ಥಿತರಿದ್ದರು.
PHOTO : ಶುಕ್ರವಾರ ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ನ್ಯಾಷನಲ್ ಅಪನಿ ಪಕ್ಷದ ರಾಜ್ಯದ ಅಧ್ಯಕ್ಷ ಪಿರೋಜ್ ಬಿ ಎಸ್ ಮಾತನಾಡಿದ್ದರು.