ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ
ಬೀದರ್
ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ
ಬೀದರ್: ವಿಶ್ವಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಹುಮನಾಬಾದ್‍ನ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಭೀಮೇಶ್ ಪಾಂಚಾಳ್ ನುಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ವತಿಯಿಂದ ಬೀದರ ನಗರದ ಡಾ ll ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾಯಕದಲ್ಲೇ ಕೈಲಾಸ ಕಂಡವರು ವಿಶ್ವಕರ್ಮರು. ಹಲವು ಬಗೆಯ ಕೆಲಸ ಮಾಡುವ ಸಮುದಾಯದವರನ್ನು ಕಲಾ ತಪಸ್ವಿಗಳೆಂದೇ ಕರೆಯಲಾಗುತ್ತದೆ. ವಿಶ್ವಕರ್ಮರ ಶಿಲ್ಪಜ್ಞಾನಕ್ಕೆ ಮಾರು ಹೋಗದವರೇ ಇಲ್ಲ ಎಂದು ತಿಳಿಸಿದರು.
ಇಂದ್ರಪ್ರಸ್ತ, ದ್ವಾರಕಾ, ಲಂಕಾ, ರಾಮ ಸೇತುವೆ, ಅಯೋಧ್ಯೆ, ಬೇಲೂರು, ಹಳೆಬೀಡು, ಶ್ರವಣ ಬೆಳಗೋಳ, ಬಾದಾಪಿ, ಹಂಪಿ, ಪಟ್ಟದಕಲ್ಲು ಮೊದಲಾದವುಗಳ ನಿರ್ಮಾಪಕರು ವಿಶ್ವಕರ್ಮರು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸಮಾರಂಭವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಾದ ಸಿದ್ದರಾಮ ಶಿಂದೆ, ಹುಮನಾಬಾದ ಹಾಗೂ ಬಸವಕಲ್ಯಾಣ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ್ ಸ್ವಾಮೀಜಿ, ತಿಂಥಣಿ, ಅಡವಿಲಿಂಗ ಮಹಾರಾಜರು, ವೇದ ಬ್ರಹ್ಮ ಶ್ರೀ ಮಹಾದೇವ ಆಚಾರ್ಯ ಹಾಗೂ ಉತ್ತಪ್ಪ ತಾತ ಅವರು ಸಾನಿಧ್ಯ ವಹಿಸಿದ್ದರು.
ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಾಂಚಾಳ, ಉಪಾಧ್ಯಕ್ಷ ಪಾಂಡುರಂಗ ಪಾಂಚಾಳ, ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ, ಖಜಾಂಚಿ ನಾರಾಯಣ ವಿಶ್ವಕರ್ಮ, ವಿಜಯಕುಮಾರ ವಿಶ್ವಕರ್ಮ , ರವಿಕುಮಾರ ವಿಶ್ವಕರ್ಮ ಹುಮನಾಬಾದ, ಪಾಂಡುರಂಗ ವಿಶ್ವಕರ್ಮ ಇಸ್ಲಾಂಮಾಪುರ, ಬಾಬುರಾವ ಚಾಂಬೋಳ್, ಬಾಬುರಾವ್ ಚಿಮಕೋಡ್, ಜಗನ್ನಾಥ, ದೇವೇಂದ್ರ, ಈರಣ್ಣ, ಸರ್ವೇಶ್, ಸುರೇಶ್ ಕಣಜಿ, ಚಂದ್ರಕಲಾ ವಿಶ್ವಕರ್ಮ, ಈರಣ್ಣ ವಿಶ್ವಕರ್ಮ ಬಸವಕಲ್, ಅಶೋಕ ವಿಶ್ವಕರ್ಮ ಹುಮನಾಬಾದ್, ಶಾಮರಾವ್ ಚಾಂಬೋಳ್, ಅರವಿಂದ ಮದರಗಿ, ದೀಪಕ್ ಚಾಂದೋರಿ, ಚಂದ್ರಕಾಂತ ಶ್ರೀಮಂಡಲ್, ಸದಾನಂದ ಮೆಳಕುಂದಾ, ಕಮಲಾಕರ್ ವಿಶ್ವಕರ್ಮ, ಉಮೇಶ್, ರಮೇಶ ಜಾಂಪಾಡ್, ವೀರಶೆಟ್ಟಿ ಆಲೂರ, ಸದಾನಂದ ಹಳ್ಳಿಖೆಡ್, ಸುನಿಲ್ ಹುಮನಾಬಾದ ಸಂಜುಕುಮಾರ್ ದುಬಲಗುಂಡಿ
ಮತ್ತಿತರರು ಇದ್ದರು. ಜಿಲ್ಲೆಯ ವಿವಿಧೆಡೆಯಿಂದ ವಿಶ್ವಕರ್ಮ ಸಮುದಾಯದ ಜನ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.