ಅನುಮತಿ ಇಲ್ಲದೆ ಬುಲ್ಡೋಝರ್ ಕಾರ್ಯಾಚರಣೆಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್
ದೇಶದ ಬುಲ್ಡೋಜರ್ ರಾಜ್ ನೀತಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ವಿಧಿಸಿದೆ. ಸುಪ್ರೀಂ ಕೋರ್ಟ್ ನ ಅನುಮತಿ ಇಲ್ಲದೆ ಯಾವುದೇ ಕಟ್ಟಡ ಮನೆಗಳನ್ನು ಸರ್ಕಾರ ಬುಲ್ಟೋಝರ್ ಬಳಸಿ ಧ್ವಂಸಗೊಳಿಸಬಾರದು ಎಂದು ಆದೇಶಿಸಿದೆ.
ಜಸ್ಟಿಸ್ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದೆ. ಬುಲ್ಡೋಜರ್ ರಾಜ್ ಗೆ ಸಂಬಂಧಿಸಿದ ಅರ್ಜಿಗಳು ಅಕ್ಟೋಬರ್ ಒಂದರಂದು ಮತ್ತೆ ಪರಿಗಣನೆಗೆ ಬರಲಿದೆ. ಅಲ್ಲಿಯವರೆಗೆ ಬುಲ್ಡೋಜರ್ ರಾಜ್ ನೀತಿಗೆ ತಡೆ ಹೇರಲಾಗಿದೆ. ಉತ್ತರ ಪ್ರದೇಶ ಮಧ್ಯಪ್ರದೇಶ ಹರಿಯಾಣ ಅಸ್ಸಾಂ ಮುಂತಾದ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬುಲ್ಡೋಜರ್ ಅನ್ನು ಅತ್ಯಂತ ಪಕ್ಷಪಾತಿತನದಿಂದ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ಮುಖ್ಯವಾಗಿ ಮುಸ್ಲಿಮರ ಮನೆಗಳನ್ನೇ ದ್ವಂಸಗೊಳಿಸಿರುವುದು ಮಾಹಿತಿಗಳಿಂದ ಸ್ಪಷ್ಟವಾಗಿದೆ.
ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾದವರೆಂದು ಆರೋಪಿಸಿ ಅವರ ಮನೆಗಳನ್ನು ದ್ವಂಸಗೊಳಿಸುವ ಪರಿಪಾಠ 2017 ರಿಂದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಆರಂಭಿಸಿದರು. ಅದು ಆ ಬಳಿಕ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಿಗೂ ಹಬ್ಬಿತು. ಈ ಹಿನ್ನೆಲೆಯಲ್ಲಿ ಈ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ