(ಎಸ್.ಎಮ್.ಜೆ) ಮಾನವ ಹಕ್ಕುಗಳ ಸಂಘ ಬೈಲಹೊಂಗಲ ಘಟಕದ ವತಿಯಿಂದ ಬೈಲಹೊಂಗಲದ ಸಾರ್ವಜನಿಕ ಆಸ್ಪತ್ರೆ ಬಡ ರೋಗಿಗಳಿಗೆ ಹಾಗೂ ಅನಾಥಾಶ್ರಮಗಳಿಗೆ ಹಣ್ಣು ಹಂಪಲಗಳನ್ನು ನೀಡಿ ಈದ-ಮಿಲಾದ್-ಹಾಗು ಗಣೇಶ್ ಹಬ್ಬ ಆಚರಣೆ
ಈದ್ ಮಿಲಾದ್ ಹಾಗೂ ಗಣೇಶ್ ಚತುರ್ಥಿ ಹಬ್ಬದ ಪ್ರಯುಕ್ತ ಭಾವ್ಯಕತೆಯ ಹಾಗೂ ಸಮಾನತೆ ದೃಷ್ಟಿಯಿಂದ ಬೈಲಹೊಂಗಲ ಪಟ್ಟಣದ (ಎಸ್ ಎಂ ಜೆ) ಮಾನವ ಹಕ್ಕುಗಳ ಸಂಘ ಹಾಗೂ ಎ ಐ ಸಿ ಸಿ ಮಾನವ ಹಕ್ಕುಗಳ ಸಂಯುಕ್ತ ಆಶ್ರಯದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿಕೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅನಾಥಾಶ್ರಮಗಳಿಗೆ ಹಣ್ಣು ಹಂಪಲ ವಿತರಣಾ ಸಮಾರಂಭವು ಏರ್ಪಡಿಸಿದ್ದರು ಸಭೆಯ ಅಧ್ಯಕ್ಷತೆಯವಹಿಸಿ ಮಾತನಾಡಿದ ನ್ಯಾಯವಾದಿ ಶಫಿ ಅಹಮದ್ ಅಂಕಲಗಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಸಂವಿಧಾನದ ಉಲ್ಲಂಘನೆಯ ಪರಿಣಾಮದ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಸಂಘಟನೆಗಳು ಇಂದಿನ ದಿನ ಹಮ್ಮಿಕೊಂಡಿರುವ ಕಾರ್ಯಕ್ರಮವು ಮಾನವ ಕುಲಕ್ಕೆ ಮಾರ್ಗದರ್ಶನವಾಗಲಿ.ಪ್ರವಾದಿ ಮಹಮ್ಮದ್ ಪೈಗಂಬರ್ ಸಂದೇಶಗಳನ್ನು ಓದುತ್ತಾ ಹೋದರೆ ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಅವರ ಚಿಂತನೆ ಕಂಡು ಬರುತ್ತದೆ ಎಂದರು ಇಂತಹ ಮಹಾನ ವ್ಯಕ್ತಿಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಬೇಕೆಂದರು ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಮೆಹಬೂಬ್ ಸುಬಾನಿ ಶಿಲ್ಲೆದಾರ್ ಮಹೇಶ್ ತೊಟಗಿ ದಾದಾಪೀರ್ ಮುಗುಟ ಖಾನ್ ಮುಜಮಿಲ್ ಜತ್ತಿ ಉಮರ್ ಹುಬಳಿ ಸೇರಿ ಹಲವು ಸದಸ್ಯರು ಉಪಸ್ಥಿತರಿದ್ದರು.