logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸಾಮಾನ್ಯ ಜನರಿಗೆ ಇಲ್ಲ ಫಾರಂ 3 ಲಂಚ ಕೊಟ್ಟವರಿಗೆ ಮಾತ್ರ

ಸಿರುಗುಪ್ಪ ನಗರಸಭೆ ಮುನಿಸಿಪಾಲಿಟಿಯಲ್ಲಿ ಫಾರಂ 3 ಕೊಡೋದಕ್ಕೆ ವರ್ಷಗಟ್ಟಲೆ ಸಮಯ ತಗೊಳ್ಳುತ್ತಿದರೆ  ಇಲ್ಲಿ ದುಡು ಕೊಟ್ರೆ ಮಾತ್ರ ಕೆಲಸ ಆಗುತ್ತೆ ಇಲ್ಲ ಅಂದ್ರೆ ಆಗಲ್ಲ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಯಾರಾದ್ರೂ ಬಡವ ವ್ಯಕ್ತಿ ಫಾರಂ 3 ಗೆ ಅಪ್ಲೈ ಮಾಡಿದಲ್ಲಿ ಅವರ ಕೆಲಸ ಆಗಲ್ಲ ದಿನಾಲು ಮುನ್ಸಿಪಾಲಿಟಿ ಮೆಟ್ಟಲು ಹತ್ತಿ ಇಳಿದು ಇಲ್ಲಿ ಜನರು ಬೇಸತ್ತಿದ್ದಾರೆ ಯಾರಾದ್ರೂ ಹೋಗಿ ಕೇಳಿದ್ರೆ ಏನೋ ಒಂದು ದಾಖಲೆ ಕೇಳುತ್ತಾರೆ ಅದನ್ನು ತಂದು ಕೊಟ್ರೆ ದಿನಾಲು ಸರ್ವರ್ ಇಲ್ಲ ಲಾಗಿನ್ ಅಲ್ಲಿದೆ ಸಾರ್ ಬಂದಿಲ್ಲ ನಾಳೆ ಕೊಡುತ್ತಿನಿ ಕರೆಂಟ್ ಇಲ್ಲ ಈ ತರಹ 108 ಕಾರಣ ಹೇಳಿ ವರ್ಷ್ ಗಳು ಕಳೆದರೂ ಫಾರಂ 3 ಕೊಡುತ್ತಿಲ್ಲ ಆದ್ರೆ ಲಂಚ ಕೊಟ್ರೆ ಮಾತ್ರ ಇಲ್ಲಿ ಕೆಲಸ ಆಗುತ್ತೆ ಒಬ್ಬ ಬಡ ವ್ಯಕ್ತಿ ಲಂಚ ಎಳಿಂದ ಕೊಡೋದು ಯಾರಾದ್ರೂ ಒಬ್ಬ ವ್ಯಕ್ತಿ ಬಂದು ಜೋರಾಗಿ ಮಾತಾಡಿ ಇನ್ನು ಎಷ್ಟು ದಿನ ಮಾಡ್ತೀರಿ ಅಂತ ಕೇಳಿದ್ರೆ ಏನಾದ್ರೂ ದಾಖಲೆ ಕೇಳ್ತಾರೆ ಇಲ್ಲ  ಲಿಂಕ್ ಡಾಕ್ಯುಮೆಂಟ್ ಇಲ್ಲ ಅಂತ ಉತ್ರ ಕೊಡುತ್ತಾರೆ ದಾಖಲೆ ಇಲ್ಲ ಅಂದ್ರೆ ಅದನ್ನ ಅವರು ನೊಟೀಸ್ ಮೂಲಕ ಕೇಳ್ಬೇಕು ನೊಟೀಸ್ ಮೂಲಕ ಕೇಳೋ ಒಂದು ಕೆಲ್ಸನು ಇಲ್ಲಿಯ ಸಿಬ್ಬಂದಿ ಗಳಿಂದ ಆಗುತ್ತಿಲ್ಲ ಈ ವಿಷಯವನ್ನು ಮೇಲಾಧಿಕಾರಿಗಳು ಕೂಡಲೇ ಸರಿ ಮಾಡಬೇಕು ಅಂತ ಸಾಮಾನ್ಯ ಜನರು ವಿನಂತಿಸಿದ್ದಾರೆ
ಒಬ್ಬ ವ್ಯಕ್ತಿ RTI ಹಾಕಿದ್ರು ಆ RTI ಗು ಉತ್ರ ಕೊಡುತ್ತಿಲ್ಲ ಅಂದ್ರೆ ಇಲ್ಲಿಯ ಪರಿಸ್ಥಿತಿ ಎಷ್ಟೊಂದು ಹದ ಗೆಟ್ಟಿದೆ ಅಂತ ಗೊತ್ತಾಗುತ್ತೆ  ಮುಖ್ಯ ವ್ಯಾಗಿ ಮುನಿಸಿಪಾಲಿಟಿ ಕಮಿಷನರ್ ವಿನ  ಕಾರಣಕ್ಕೆ ಫೈಲ್ ರಿಜೆಕ್ಟ್ ಮಾಡುತ್ತಿದ್ದಾರೆ  ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು  ಗಂಭೀರ ವಾಗಿ ಪರಿಗಣಿಸಿ ಇನ್ನು ಮುಂದೆ ಇತರ ಆಗದೆ ಇರೋ ತರ ನೋಡಿ ಕೊಳ್ಳ ಬೇಕೆಂದು ಜನ ಸಾಮಾನ್ಯರು ವಿನಂತಿಸಿದ್ದಾರೆ

137
271 views

Comment