ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರ ಸನ್ಮಾನ ಮತ್ತು ಗುರು ನಮನ ಕಾರ್ಯಕ್ರಮ ಅಥಣಿ ಪಟ್ಟಣದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು
ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರ ಸನ್ಮಾನ ಮತ್ತು ಗುರು ನಮನ ಕಾರ್ಯಕ್ರಮ ಅಥಣಿ ಪಟ್ಟಣದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಸಂಸ್ಥಾಪಕರಾದ ನಿಜಪ್ಪ ಹಿರೇಮನಿ ಮತ್ತು ಕೃಪಾ ಆರೋಗ್ಯ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷೆ ಸಂಗೀತಾ ಹಿರೇಮನಿ ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆಯ ನಿಮಿತ್ಯವಾಗಿ ಕೆ ಎಲ್ ಇ ಸಿಬಿಎಸ್ ಈ ರನಮೋಡೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಜಗದೀಶ ಹವಾಲ್ದಾರ್, ಕೆ ಎಲ್ ಇ ಎಸ್ ಎಸ್ ಎಮ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ" ರೇಷ್ಮಾ ಇನಾಮ್ ದಾರಯ ಮತ್ತು ಎಸ್ ಎಸ್ ಎಮ್ ಎಸ್ ಡಿಗ್ರಿ ಕಾಲೇಜಿನ ಡಾ"ಬಸಪ್ಪ ಕಾಂಬಳೆ ಹಾಗೂ ಕೆ ಎಲ್ ಇ ಸಂಸ್ಥೆಯ ಸಿ ಎಸ್ ಕಿತ್ತೂರ ಹೈಸ್ಕೂಲ್ ಪ್ರಾಂಶುಪಾಲರಾದ ಎಸ್ ಜಿ ಸಲಗರೆ ಅವರನ್ನು ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮಕ್ಕಳು ಹಾಗೂ ಸಂಸ್ಥಾಪಕ ಅಧ್ಯಕ್ಷರು ಗೌರವ ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮ ನೆರವೇರಿತು.
ಈ ವೇಳೆ ಮಾತನಾಡಿದ ಸಂಗೀತಾ ಹಿರೇಮನಿ ಅವರು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರಿಯ ಸಾಧನೆಗೆ ಗುರುವಿನ ಸಲಹೆ,ಸೂಚನೆ ಮತ್ತು ನಿರ್ದೇಶನದ ಅವಶ್ಯಕತೆ ಇದೆ ಗುರು ಇಲ್ಲದೆ ಗುರಿಯ ಸಾಧನೆ ಅಸಾಧ್ಯ ಎಂದರು.
ಈ ವೇಳೆ ಸನ್ಮಾನ ಸ್ಬೀಕರಿಸಿ ಮಾತನಾಡಿದ ಡಾ ರೇಷ್ಮಾ ಇನಾಂದಾರ ಗುರುಗಳ ನಿಜವಾದ ಕಾಣಿಕೆ ಎನ್ನುವದು ಅವರ ಶಿಷ್ಯರ ಸಾಧನೆಯಲ್ಲಿ ಅಡಗಿದೆ ಇಂದಿನ ಕೃಪಾ ಸಮಾಜ ಸೇವಾ ಸಂಸ್ಥೆಯ ಮಕ್ಕಳು ಏರ್ಪಡಿಸಿದ ಸನ್ಮಾನದಿಂದ ಹೃದಯ ತುಂಬಿ ಬಂದಿದೆ.ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆಗೆ ಏರಿ ಸಮಾಜ ಸೇವೆಯನ್ನು ಇಲ್ಲಿನ ಮಕ್ಕಳು ಮುಂದುವರೆಸಿದರೆ ನಮಗರ ನಿಜವಾದ ಗುರುಕಾಣಿಕೆ ಸಿಕ್ಕಂತೆ ಆಗುತ್ತದೆ ಎಂದರು.
ಈ ವೇಳೆ ಕೃಪಾ ಆರೋಗ್ಯ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಡುವೆ ನಿಜಪ್ಪ ಹಿರೆಮನಿ ತಮ್ಮ ಬಾಲ್ಯದಲ್ಲಿ ತಮಗೆ ಸಿಕ್ಕ ಸಂಸ್ಕಾರ ತಮ್ಮ ಗುರುಗಳಿಂದ ಬಂದಿದೆ.ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಇಂದಿನವರೆಗಿನ ಸಮಾಜ ಸೇವೆಗೆ ಗುರುಹಿರಿಯರ ಸಲಹೆ ಸೂಚನೆಗಳ ಜೊತೆಗೆ ತೋರುವ ಉದಾರತೆ ದೊಡ್ಡದು ಎಂದರು.
ಈ ವೇಳೆ ಸಮಾಜ ಸೇವಾ ಸಂಸ್ಥೆಯ ಮಕ್ಕಳು ಮತ್ತು ಡಾ ರೇಷ್ಮಾ ಇನಾಮದಾರ, ಶ್ರೀ ಜಗದೀಶ ಹವಾಲದಾರ, ಡಾ ಬಸಪ್ಪ ಕಾಂಬಳೆ ಹಾಗೂ ಶ್ರೀ ಎಸ್ ಜಿ ಸಲಗರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು