logo

ಅತ್ಯಾಚಾರಿಗಳಿಗೆ 10 ದಿನದಲ್ಲಿ ಗಲ್ಲು ಶಿಕ್ಷೆ; ಪಶ್ಚಿಮ ಬಂಗಾಳದಲ್ಲಿ ಆ್ಯಂಟಿ ರೇಪ್ ಬಿಲ್ ಪಾಸ್

ಕೋಲ್ಕತಾ: ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಸರ್ಕಾರವು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಇಂದು ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಆ್ಯಂಟಿ ರೇಪ್ ಬಿಲ್ ಪಾಸ್ ಆಗಿದೆ. ಅಪರಾಜಿತ ಮಹಿಳಾ ಮತ್ತು ಮಕ್ಕಳ ಬಿಲ್ 2024 ಕಾಯ್ದೆಯನ್ನು ಇಂದು ರಾಜ್ಯ ಕಾನೂನು ಸಚಿವ ಮೊಲೊಯ್ ಘಾಚಕ್ ಮಂಡಿಸಿದ್ದರು.

ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಬಿಲ್ ಅನುಮತಿಸುತ್ತದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಭಾರತದಲ್ಲಿ ಇದೇ ಮೊದಲಾಗಿ ಪಶ್ಚಿಮ ಬಂಗಾಳ ಜಾರಿಗೆ ತರಲು ನಿರ್ಧರಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಈ ಮಸೂದೆಗೆ ಪಾಸ್ ಆಗಿದೆ. ಇದೀಗ ಮೇಲ್ಮನೆಯಲ್ಲಿ ಈ ಬಿಲ್ ಸೆಪ್ಟೆಂಬರ್ 5 ರಂದು ಮಂಡನೆಯಾಗಲಿದೆ. ಬಳಿಕ ರಾಜ್ಯಪಾಲರ ಅಂಕಿತದೊಂಂದಿಗೆ ಜಾರಿಗೆ ಬರುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಮತಾ ಬ್ಯಾನರ್ಜಿ ಸರ್ಕಾರ ಇದೀಗ ಐತಿಹಾಸಿಕ ಬಿಲ್ ಪಾಸ್ ಮಾಡಿ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲು ಮುಂದಾಗಿದೆ.

ಇದೇ ವೇಳೆ ಪೊಲೀಸರು ಅತ್ಯಾಚಾರ ಪ್ರಕರಣದ ವೇಳೆ ಕೇಸ್ ದಾಖಲಿಸಿಕೊಳ್ಳಲು ವಿಳಂಬ ಮಾಡಿದರೆ, ಹಿಂದೇಟು ಹಾಕಿದರೆ ಅಂತವರನ್ನು ಅಮಾನತು ಮಾಡಲು ಈ ಬಿಲ್ ಅನುಮತಿಸುತ್ತದೆ. ಪ್ರಕರಣದ ಗಂಭೀರತೆ ಮೇಲೆ ಅತ್ಯಾಚಾರಿಗಳಿಗೆ ಮರಣದಂಡನೆ, ಯಾವುದೇ ಪರೋಲ್ ಇಲ್ಲದೆ ಜೈಲು ಶಿಕ್ಷೆ ಸೇರಿದಂತೆ ಹಲವು ಕಠಿಣ ಶಿಕ್ಷೆಗಳಿಗೆ ಈ ಮಸೂದೆ ಅನುಮತಿಸುತ್ತದೆ.

31
3316 views