logo

ಧರ್ಮಸ್ಥಳ ಯೋಜನೆಯ ಮೂಲಕ ಮಹಿಳೆಯರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ.

ಬೆಳಗಾವಿ: ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಮೂಹಿಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮಹಿಳೆಯರಲ್ಲಿ ಸಾಮಾಜಿಕ ಧಾರ್ಮಿಕ ಸಂಸ್ಕಾರಗಳನ್ನು ನೀಡುತ್ತಿರುವುದು ಶ್ರೇಷ್ಠ ಕಾರ್ಯ ಎಂದು ಜಿ ಆರ್ ಸೋನೆರ ಹೇಳಿದರು.

ಕಾರ್ಯ ತಾಲೂಕಿನ ಕಂಗ್ರಾಳಿ ಕೆ ಎಚ್ ಹರೆ ಕೃಷ್ಣ ಸಭಾಭವನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಿಂದ ಆಯೋಜಿಸಲಾದ ಸಾಮೂಹಿಕ ಶ್ರೀ ಮಹಾಶಿವನಿಗೆ ಸಜಸ್ರ ಬಿಲ್ವಾರ್ಚನೆ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ತಾಲೂಕ ಯೋಜನಾಧಿಕಾರಿ ನಾಗರಾಜ ಹಡ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಮಾಜಮುಖಿ ಕೆಲಸಗಳ ಮೂಲಕ ಮಹತ್ತರವಾದ ಕಾರ್ಯವನ್ನು ಮಾಡುತ್ತಿದ್ದಾರೆ ಯೋಜನೆಯ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಜನ- ರಿಗೆ ಯಾವುದೆ ಆಸ್ತಿ ಪತ್ರಗಳಿಲ್ಲದೆ ಬ್ಯಾಂಕ್ ಗಳಿಗೆ ತಾನು ಜವಾಬ್ದಾರಿಯಾಗಿ ನಿಂತು ಜನರ ಆರ್ಥಿಕ ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾದ್ದು ಇವತ್ತಿನ ಜನ ಮಾನದಲ್ಲಿ ಒಡಹುಟ್ಟಿದವರೆ ಜವಾಬ್ದಾರಿ ತಗೆದುಕೊಳ್ಳದಿರುವಾಗ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.

ನಮ್ಮ ಆರೋಗ್ಯ ಆಯುಷ್ಯ ಶಾಂತಿ ನೆಮ್ಮದಿ ಸಂತಾನ ಪ್ರಾಪ್ತಿಗಾಗಿ ಹಾಗೂ ಸಕಲ ಸಂಪತ್ತು ಕರುಣಿಸಲೆಂದು ಶ್ರಾವಣ ಮಾಸದಲ್ಲಿ ಪೂಜೆಯನ್ನು ಮಾಡುವಂತದ್ದು ಭಾರತೀಯ ಹಿಂದೂಗಳ ನಂಬಿಕೆ, ಎಲ್ಲರೂ ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದರಿಂದ ಧಾರ್ಮಿಕ ಭಾವನೆ ಹೆಚ್ಚಾಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಹಿರಿಯ ವಕೀಲರು ಆದ ಜಿ. ಆರ್ ಸೋನೆರ್ ರವರು ತಿಳಿಸಿದರು.

ಬ್ಯಾಂಕ್ ಆಪ್ ಮಹಾರಾಷ್ಟ್ರ ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಗೋಪಾಲಜೀ ಅಕೇಲಾ ಅವರು ಮಾತನಾಡಿ, ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿ ಸ್ವ ಸಹಾಯ ಸಂಘಗಳು ಬ್ಯಾಂಕ್ ಆಪ್ ಮಹಾರಾಷ್ಟ್ರ ಬ್ಯಾಂಕ್ ಮೂಲಕ ಇವತ್ತು ಪ್ರತಿ ಸಂಘಗಳಿಗೆ ಅವರ ಅಹರ್ತೆ ಪ್ರಕಾರ 25 ಲಕ್ಷ ರೂಪಾಯಿ. ವರೆಗೆ ಸಾಲ ಪಡೆದುಕೊಳ್ಳುತ್ತಿರುವುದು ಮಹಿಳೆಯರ ಆರ್ಥಿಕ ಶಿಸ್ತನ್ನು ತೋರಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಟೀಲ, ಪೋಲಿಸ್ ಕಲ್ಲಗೌಡ ಕಮಲಾ ನಾಣ್ಣನವರ. ಮಿಲಿಂದ ಮುತಗೇಕರ ಬ್ಯಾಂಕ್ ಆಪ್ ಮಹಾರಾಷ್ಟ್ರ ಪ್ರಬಂಧಕರಾದ ಕಮಜಾದಖಾನ, ಕೃಷಿ ಮೇಲ್ವಿಚಾರಕರಾದ ನಾಗರಾಜ್ ಅಬ್ಬಿಗೇರಿ, TNO ಜೀತೇಂದ್ರ ಇಮಗೌಡನವರ, ನಗದು ಮೇಲ್ವಿಚಾರಕ ಪ್ರಕಾಶ ಬಾನಸಗಿ, ಸ್ವಸಹಾಯ ಸಂಘಗಳ ಒಕ್ಕೂಟ ಸುರೇಖಾ ಹರಿಜನ ಸುಧಾ ನಾಯ್ಕ, ಸೇವಾಪ್ರತಿನಿಧಿಗಳಾದ ಗೌರವ್ವ ಜಂಗಮ. ಭಾಗ್ಯಶ್ರೀ ಶೇಖರಗೋಳ, ಸುರೇಖಾ ತಳವಾರ, ಪ್ರೇಮಾ ನಾಯ್ಕ ಮಾದುರಿ ಸುತಾರ, ಮಾದುರಿ, ಭಾರತಿ ಅಷ್ಟೇಕರ, ಸೇವಾಕಾರ್ಯಕರ್ತ ಸ್ವ ಸಹಾಯ ಸಂಘದ ಸದಸ್ಯರು ಇತರರು. ಮೇಲ್ವಿಚಾರಕರಾದ ವೈಶಾಲಿ ಪಟಗಾರ ಸ್ವಾಗತಿಸಿ ವಂದಿಸಿದರು.

16
2321 views