logo

ತಾಯಿಯನ್ನು ಕೊಂದ ಯುವಕ: ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ‘ಕ್ಷಮಿಸಿ ಅಮ್ಮಾ’ ಎಂದ ಕಿಲ್ಲರ್ ಮಗ.

ವರದಿ: ನಜೀರ ಅಹಮ್ಮದ.

"ತಾಯಿಯೇ ದೇವರು" ಎಂಬ ಮಾತಿಗೆ ವಿರುದ್ಧವಾಗಿ ಇಲ್ಲೋಬ್ಬ ಯುವಕ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿ ನಂತರ ಆಕೆಯ ಶವದೊಂದಿಗೆ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಗುಜರಾತಿನ ರಾಜ್ ಕೋಟ್ ನಲ್ಲಿ 21 ವರ್ಷದ ಯುವಕನನ್ನು ಬಂಧಿಸಲಾಗಿದೆ.

ಸ್ಥಳೀಯ ನಿವಾಸಿಯೊಬ್ಬರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ರಾಜ್ ಕೋಟ್‌ನ ಯೂನಿವರ್ಸಿಟಿ ರಸ್ತೆಯ ಭಗತ್ಸಿಂಗ್ಜಿ ಗಾರ್ಡನ್ ನಲ್ಲಿ ತನ್ನ ತಾಯಿಯ ಶವದ ಪಕ್ಕದಲ್ಲಿ ಕುಳಿತಿದ್ದ ಆರೋಪಿ ನಿಲೇಶ್ ಗೋಸೈ ಅವರನ್ನು ನೋಡಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.ಮೃತರನ್ನು 48 ವರ್ಷದ ಜ್ಯೋತಿ ಬೆನ್ ಗೋಸೈ ಎಂದು ಗುರುತಿಸಲಾಗಿದೆ.

ನೀಲೇಶ್ ವಿಚಾರಣೆಯ ಸಮಯದಲ್ಲಿ ಕೊಲೆಯನ್ನು ಒಪ್ಪಿಕೊಂಡಿದ್ದು, ಆರಂಭದಲ್ಲಿ ತನ್ನ ತಾಯಿಯ ಮೇಲೆ ಚಾಕುವಿನಿಂದ ದಾಳಿ ಮಾಡಲು ಪ್ರಯತ್ನಿಸಿದ್ದನ್ನು ಬಹಿರಂಗಪಡಿಸಿದ್ದಾನೆ. ತಾಯಿ ಜ್ಯೋತಿ ಬೆನ್ ಚಾಕುವನ್ನು ಕಸಿದುಕೊಂಡಾಗ, ನಿಲೇಶ್ ಕಂಬಳಿಯಿಂದ ಅವಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.

ಅಪರಾಧವನ್ನು ಮಾಡಿದ ನಂತರ, “ಕ್ಷಮಿಸಿ ತಾಯಿ ನಾನು ನಿನ್ನನ್ನು ಕೊಲ್ಲುತ್ತೇನೆ, ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಓಂ ಶಾಂತಿ (sic)” ಎಂಬ ಶೀರ್ಷಿಕೆಯೊಂದಿಗೆ ತನ್ನ ತಾಯಿಯ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಮತ್ತೊಂದು ಪೋಸ್ಟ್‌ನಲ್ಲಿ, “ನಾನು ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ನನ್ನ ಜೀವವನ್ನು ಕಳೆದುಕೊಳ್ಳುತ್ತೇನೆ, ಕ್ಷಮಿಸಿ ತಾಯಿ, ಓಂ ಶಾಂತಿ, ಮಿಸ್ ಯು ಮಾಮ್ (sic)” ಎಂದು ಬರೆದಿದ್ದಾರೆ.

ಆರಂಭಿಕ ತನಿಖೆಯ ನಂತರ ಜ್ಯೋತಿ ಬೆನ್ ಹಲವು ವರ್ಷಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರೋದು ಗೊತ್ತಾಗಿದೆ. ಇದು ತಾಯಿ – ಮಗನ ನಡುವೆ ಘರ್ಷಣೆಗೆ ಕಾರಣವಾಗುತ್ತಿತ್ತು.

ಘಟನೆಯ ದಿನದಂದು ನಿಲೇಶ್ ಮತ್ತು ಜ್ಯೋತಿ ಬೆನ್ ನಡುವೆ ತೀವ್ರ ವಾಗ್ವಾದ ನಡೆದು ಹಿಂಸಾಚಾರಕ್ಕೆ ತಿರುಗಿತ್ತು.

62
5386 views