logo

ಆರೋಗ್ಯ ಮತ್ತು ಆಹಾರ ಇಲಾಖೆ ಕುಂಭಕರ್ಣ ನಿದ್ದೆಯಿಂದ ಬೇಗ ಎಚ್ಚಾರಗೊಳ್ಳಲಿ.

ಬಹುಶಃ ಈ ಕಾಲದ ಅತಿದೊಡ್ಡ ಅಪಾಯ ಯಾವುದೆಂದರೆ ಅದು ಕಲಬೆರಕೆ ಆಹಾರ. ಇತ್ತೀಚೆಗೆ ಮನುಕುಲವನ್ನು ಕಾಡುತ್ತಿರುವ ಅದೆಷ್ಟೋ ಕಾಯಿಲೆಗಳ ಮೂಲವೂ ಈ ಕಲಬೆರಕೆ ಆಹಾರವೇ, ಅದಕ್ಕೆ ನಮ್ಮ ಹಿಂದಿನವರು ಆಹಾರವೇ ಆರೋಗ್ಯ ಎನ್ನುತ್ತಿದ್ದರು. ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ ವಿಷಬೆರೆಸುವುದು ಅಥವಾ ಕಲಬೆರಕೆ ಮಾಡುವುದು ಮಹಾಪಾಪ. ಅಂಥವರನ್ನು ಆತತಾಯಿ ವರ್ಗಕ್ಕೆ (ಪಾಪಿ ಅಥವಾ ದುಷ್ಟರ) ಸೇರಿಸುತ್ತಿದ್ದರು. ಆದರೆ ಇಂದು ಕಲಬೆರಕೆ ಇಲ್ಲದ ಆಹಾರ ಯಾವುದಿದೆ ಹೇಳಿ ? ಅದರಲ್ಲೂ ಮಕ್ಕಳ ಆರೋಗ್ಯದ ಮೇಲೆ ಈ‌ ಕಲಬೆರಕೆ ಆಹಾರ ಮಾಡುತ್ತಿದ್ದ ದುಷ್ಪರಿಣಾಮ ಅಷ್ಟಿಷ್ಟಲ್ಲ. ಆದರೆ ನಮ್ಮ ಸರ್ಕಾರಗಳು ಎಷ್ಟು ಕ್ರಮ ಕೈಗೊಂಡಿದ್ದವು ಹೇಳಿ ? ಆರೋಗ್ಯ ಇಲಾಖೆ ಮತ್ತು ಆಹಾರ ಇಲಾಖೆ ಏನು ಮಾಡುತ್ತಿದ್ದಾರೆ.ಎಲ್ಲರೂ ಕಣ್ಣುಮುಚ್ಚಿ ಆರಾಮಾಗಿ ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಕಂಪನಿಗಳಿಂದ ಹಣವನ್ನು ತೆಗೆದುಕೊಂಡು ಎಲ್ಲರಿಗೂ ಯಾವುದೇ ಮಾನದಂಡವಿಲ್ಲದೆ ಆಹಾರ ಸಾಮಗ್ರಿಗಳನ್ನು ಮಾರಲು ಪರವಾನಿಗೆ ನೀಡುತ್ತಾರೆ.ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಎಷ್ಟೊಂದು ದುಷ್ಟರಿಣಾಮ ಬೀರುತ್ತಿದೆ ಎಂದರೆ ಹೇಳಲು ಆಗುತ್ತಿಲ್ಲ.

ಈ ದಿಶೆಯಲ್ಲಿ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶ್ಲಾಘನೀಯ ಹೆಜ್ಜೆ ಇಟ್ಟಿದ್ದಾರೆ. ಆಹಾರ ಕಲಬೆರಕೆ ನಿಯಂತ್ರಣಕ್ಕೆ ಕಳೆದ ಏಪ್ರೀಲ್ ನಿಂದ ಸತತ ಅಭಿಯಾನ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧೀನದಲ್ಲಿ ಆಹಾರ ಸುರಕ್ಷತಾ ವಿಭಾಗ ಎಂಬುದೊಂದು ಇದೆ ಎಂಬುದು ಬೆಳಕಿಗೆ ಈ ಹಿಂದೆ ಆರೋಗ್ಯ ಸಚಿವರಾಗಿದ್ದವರು ಈ ವಿಭಾಗವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರೆಂಬುದು ಗೊತ್ತಿಲ್ಲ. ಒಂದು ರೀತಿ ಅದು ಅಳತೆ ಮತ್ತು ಮಾಪನ ಇಲಾಖೆಯ ರೀತಿ ಭೂಗತವಾಗಿತ್ತು. ಆದರೆ ದಿನೇಶ್ ಇದಕ್ಕೊಂದು ಜೀವಕೊಟ್ಟಿದ್ದಾರೆ.ಇದು ಕೇವಲ ಕಾಟಾಚಾರದ ಅಭಿಯಾನ ಆಗಬಾರದು .ತಪ್ಪಿತಸ್ಥರಿಗೆ ವಿರುದ್ಧ ಸರಿಯಾದ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು.ಆದರೆ ಇಲ್ಲಿಯವರೆಗೆ ಯಾರ ಮೇಲೆ ಕ್ರಮವು ಆಗದಿರುವುದು ನಿಜಕ್ಕೂ ನಿರಾಶಾದಾಯಕ ಬೆಳವಣಿಗೆ.ದಿನೇಶ್ ಗುಂಡೂರಾವ್ ಅವರು ಇದರ ಬಗ್ಗೆ ಯೋಚಿಸಬೇಕು.ಇದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು.ನಿಜವಾಗಿಯೂ ಆರೋಗ್ಯ ಮಂತ್ರಿಗಳಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ತಪ್ಪಿತಸ್ಥರ ಮೇಲೆ ಯಾವುದೇ ರಾಜಕೀಯ ಮಾಡದೇ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು.ಆದರೆ ಅದು ಆಗುತ್ತದೆಯೋ ಇಲ್ಲವೋ ಕಾದು ನೋಡೋಣ.

ಏಪ್ರೀಲ್ ನಿಂದ ಇಲ್ಲಿಯವರೆಗೆ 8418 ಮಾದರಿ ಸಂಗ್ರಹಿಸಲಾಗಿದ್ದು, 2596ಮಾದರಿ ಕಾನೂನಾತ್ಮಕ ಕ್ರಮಕ್ಕೆ ಅರ್ಹ ಮಾದರಿಯಾಗಿದೆಯಂತೆ ! ಪರಿಶೀಲನೆಗೆ ಒಳಪಟ್ಟವೇ ಇಷ್ಟು ಅಪಾಯಕಾರಿ. ಜುಲೈ ತಿಂಗಳಲ್ಲಿ ಸಂಗ್ರಹಿಸಿದ 2753ಮಾದರಿ ಪೈಕಿ 711 ಕ್ರಮಕ್ಕೆ ಅರ್ಹವಾಗಿದೆ. ಜುಲೈ ತಿಂಗಳಲ್ಲಿ 3467 ಆಹಾರ ಉದ್ದಿಮೆ ಪರಿಶೀಲಿಸಿ986 ಉದ್ದಿಮೆಗೆ ನೋಟಿಸ್ ನೀಡಲಾಗಿದೆ. 132 ಉದ್ದಿಮೆಗೆ ನೋಟಿಸ್ ನೀಡಿ ಸುಮಾರು 5 ಲಕ್ಷ ರೂ. ದಂಡ ವಿಧಿಸಲಾಗಿದೆಯಂತೆ. ಆಹಾರ ಭದ್ರತೆಯ ರೀತಿ ಆಹಾರ ಸುರಕ್ಷತೆಯೂ ಈ ಕಾಲದ ಅನಿವಾರ್ಯತೆ, ಅಗತ್ಯತೆ. ಈ ನಿಟ್ಟಿನಲ್ಲಿ ದಿನೇಶ್ ಗುಂಡುರಾವ್ ಇಟ್ಟ ಈ ಪುಟ್ಟ ಆದರೆ ದೃಢವಾದ ಹೆಜ್ಜೆಯನ್ನು ಅಭಿನಂದಿಸೋಣ...

ಇನ್ನೂ ಮುಂದೆ ಆದರೂ ಕಲಬೆರಕೆ ಆಹಾರಕ್ಕೆ ನಾಂದಿ ಹಾಡಿ.ಪೌಷ್ಟಿಕವಾದ ಆಹಾರ ದೊರೆಯುವಂತಾಗಲಿ.ಸರ್ಕಾರದ ಇಲಾಖೆಗಳು ಇರುವುದು ಸಾರ್ವಜನಿಕರ ಸೇವೆ ಮಾಡಲು ಹೊರಟು ಈ ರೀತಿ ಅಧಮರೊಂದಿಗೆ ಕೈಜೋಡಿಸುವುದಲ್ಲ , ಸರ್ಕಾರಿ ನೌಕರರು ಬದುಕುತ್ತಿರುವುದು ಸಾರ್ವಜನಿಕರ ತೆರಿಗೆ ಹಣದಿಂದ ಎಂದು ಮನಗಾಣಬೇಕು.ಪಾರದರ್ಶಕವಾದ ಕೆಲಸವನ್ನು ಮಾಡಬೇಕು.
ಇನ್ನಾದರೂ ಅಕ್ರಮಗಳಿಗೆ ಕಡಿವಾಣ ಹಾಕಲಿ ಎಂದು ಬಯಸೋಣ

0
0 views