logo

ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿ ಊಟ ಸೇವಿಸಿ ಅಸ್ತುವೇಸ್ತ ಆಸ್ಪತ್ರೆಗೆ ದಾಖಲು

ಕೊಪ್ಪಳ "ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ಸ್ವಲ್ಪ ಹೊತ್ತು ನಂತರ ವಾಂತಿ ಭೇದಿ ಕಾಣಿಸಿಕೊಂಡಿದೆ. ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾವಿರುವ ಮಕ್ಕಳ ಆರೋಗ್ಯದ ಸ್ಥಿತಿ ವಿಚಾರಿಸಲಾಯಿತು
ದೊಡ್ಡಬಸನಗೌಡ ಬಯ್ಯಾಪುರ
ನಜಿರ ಸಾಬ ಮೂಲಿಮನಿ ಬಸವರಾಜ ಗಾಣಗೆರೆ ಮಾತನಾಡಿದ್ದು, “ಮಧ್ಯಾಹ್ನ ಬಿಸಿಯೂಟ ನಂತರ ಮಕ್ಕಳಿಗೆ ಏಕಾಏಕಿ ವಾಂತಿ, ಹೊಟ್ಟೆನೋವು ಇನ್ನಿತರ ಸಮಸ್ಯೆ ಎದುರಾಗಿದೆ. ಸದ್ಯ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕುಷ್ಟಗಿ ತಾಲೂಕಿನ ಆಸ್ಪತ್ರೆಯಲ್ಲಿ 44 ಮಕ್ಕಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ದೋಟಿಹಾಳ ಗ್ರಾಮದ ಆರೋಗ್ಯ ಕೇಂದ್ರದಲ್ಲಿ 55 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ"ಬಿಜಕಲ್ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು, ಕಡಿಮೆ ಸಮಸ್ಯೆ ಇರುವ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ.

ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಮಂಜುಳಾ ಹಾಗೂ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ತಾಸಿನ ಬಳಿಕ ಎಂದಿನಂತೆ ಶಾಲೆ ಮುಗಿಸಿಕೊಂಡು ಮನೆಗಳಿಗೆ ವಾಪಸ್ಸಾಗಿದ್ದಾರೆ. ನಂತರ ವಾಂತಿ–ಭೇದಿ, ಕೈಕಾಲು ಸೆಳೆತ, ತಲೆಸುತ್ತು ಉಂಟಾಗಿದೆ ಎಂದು ತಿಳಿದುಬಂದಿದೆ
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಅಕ್ಷರ ದಾಸೋಹದ ಅಧಿಕಾರಿ ಶರಣಪ್ಪ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು.
ಬಿಜಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ,ಆಸ್ಪತ್ರೆಗೆ ದಾಖಲಾಗಿರುವ . ಮಕ್ಕಳ ಆರೋಗ್ಯದ ಸ್ಥಿತಿ ವಿಚಾರಿಸಲಾಯಿತು ಸದ್ಯ ಸ್ಥಿರವಾಗಿದ್ದು, ಅಬ್‌ಸರ್ವೇಷನ್ ನಲ್ಲಿ ಇಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡು ಬಂದರೆ ತಾಲೂಕ ಆಸ್ಪತ್ರೆಗೆ ಕಳಿಸಲಾಗುವುದು ಎಂದು ದೋಟಿಹಾಳ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಸಂತೋಷ್ ಬಿರಾದಾ‌ರ್ ತಿಳಿಸಿದರು.
ನಂತರ ಮಾತನಾಡಿದ ಬಿಇಒ ಸುರೇಂದ್ರ ಕಾಂಬಳೆ ಇಂತಹ ಘಟನೆ ಜರುಗಬಾರದಿತ್ತು ಆದರೆ ಆಗಿರುವುದು ದುರದೃಷ್ಟಕರ ನಲವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು ತಿಳಿದ ತಕ್ಷಣ ಬಂದು ವಿಚಾರಿಸಿದೆ ಮಕ್ಕಳು ಸುಧಾರಿಸಿಕೊಳ್ಳುತ್ತಿದ್ದು ಅವರನ್ನು ವೈದ್ಯಾಧಿಕಾರಿಗಳ ವೀಕ್ಷಣೆಯಲ್ಲಿ ಇಟ್ಟಿದ್ದಾರೆ ನನಗೆ ತಿಳಿದ ಮಟ್ಟಿಗೆ ಬಿಸಿ ಊಟಕ್ಕೆ ಬಳಸುವ ಕಾರಪುಡಿ ಬದಲಾಯಿಸಿದ್ದಕ್ಕೆ ಆಗಿರಬಹುದು ಎಂದು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ ಮುಂದಿನ ಹಂತದಲ್ಲಿ ತನಿಖೆಯಿಂದ ಪತ್ತೆ ಮಾಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ಅಶೋಕ್ ಶಿಗ್ಗಾವಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಅಲ್ಲೇ ಕೆಲಸ ಕಾರ್ಯ ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ.

25
4784 views