
ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಸರ್ಕಾರಕ್ಕೆ ಮನವಿ ಕೊಡಲಾಯಿತು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವರದಿಗಾರನ ಮೇಲೆ ಪೊಲೀಸ್ ಅಧಿಕಾರಿಗಳಿಂದ ದೌರ್ಜನ್ಯ
ಖಂಡಿಸಿ ಶಿಸ್ತುಕ್ರಮ ರಾಜ್ಯ ಸರಕಾರಕ್ಕೆ ಮನವಿ.
ಕುಷ್ಟಗಿ:- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವರದಿಗಾರ
ನಿರಂಜನ ಅವರ ಮೇಲೆ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿ ಅಶ್ವತ್‌ಗೌಡ ಅವರು ಕರ್ತವ್ಯಕ್ಕೆ
ಅಡ್ಡಿಪಡಿಸಿದ್ದಲ್ಲದೇ ನಿರಂಜನ ಅವರ ಮೊಬೈಲ್ ಕಿತ್ತುಕೊಂಡು ದೌರ್ಜನ್ಯ ಮೆರೆದಿದ್ದಾರೆ. ಅಲ್ಲದೇ ಪತ್ರಕರ್ತನಿಗೆ
ನಿನ್ನನ್ನು ಪೋಕೋ ಕಾಯ್ದೆಯಡಿ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದನ್ನು ಖಂಡಿಸಿ ಕರ್ನಾಟಕ ಕಾರ್ಯ ನಿರತ ಪತ್ರರ್ಕರ ಸಂಘ (ರಿ) ಬೆಂಗಳೂರು, ತಾಲೂಕು ಘಟಕ ಕುಷ್ಟಗಿ ಪದಾಧಿಕಾರಿಗಳಿಂದ ಕರ್ನಾಟಕ ಸರಕಾರ ಮಾನ್ಯ ಮುಖ್ಯಮಂತ್ರಿ ಸಿ.ಎಂ.ಸಿದ್ರಾಮಯ್ಯ ಇವರಿಗೆ ಕುಷ್ಟಗಿ ತಹಶೀಲ್ದಾರ ಅಶೋಕ ಶಿಗ್ಗಾವಿ ಇವರ ಮೂಲಕ ಮನವಿ ಪತ್ರ ಸಲ್ಲಿಸಿದರು.
ನಂತರ ಪತ್ರರ್ಕರ ರವೇಂದ್ರ ಬಾಕಳೆ ಮಾತನಾಡಿ ಅಧಿಕಾರಿಯ ಮೇಲೆ ತಕ್ಷಣ
ಕಾನೂನು ಕ್ರಮವಾಗಬೇಕು. ಅಲ್ಲದೇ, ರಾಜ್ಯದಲ್ಲಿ ವೃತ್ತಿನಿರತ ಪತ್ರಕರ್ತರ ಮೇಲೆ ಪದೇ ಪದೇ ದೌರ್ಜನ್ಯ,
ದಬ್ಬಾಳಿಕೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸಗಳು ನಿರಂತರ ನಡೆಯುತ್ತಲೇ ಇವೆ. ಇದರಿಂದಾಗಿ ಪತ್ರಕರ್ತರ ರಕ್ಷಣೆ
ನಡೆಯುತ್ತಿಲ್ಲ. ಸರ್ಕಾರವು ಪತ್ರಕರ್ತರ ಹಿತ ರಕ್ಷಣೆಗಾಗಿ ವಿಶೇಷ ಕಾಯ್ದೆ ಜಾರಿಮಾಡುವ ಜೊತೆಗೆ ಅವರ
ಭದ್ರತೆಗೆ ಒತ್ತು ನೀಡಬೇಕು. ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದು
ಸೇರಿದಂತೆ ಕರ್ತವ್ಯ ನಿರತ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಘನತೆವೆತ್ತ ಕರ್ನಾಟಕ ಸರಕಾರದ ಮಾನ್ಯ
ಮುಖ್ಯಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳಿಗೆ ಕುಷ್ಟಗಿ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ
ಕುಷ್ಟಗಿ ವತಿಯಿಂದ ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಉಪಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ಕ.ಕಾ.ನಿ.ಪ.ಸಂಘದ ಜಿಲ್ಲಾ ಕಾರ್ಯ ಕಾರಣಿ ಸದಸ್ಯ ರವೀಂದ್ರ ಬಾಕಳೆ, ಸಂಗಮೇಶ ಸಿಂಗಾಡಿ, ಕ.ಕಾ.ನಿ.ಪ.ಸಂಘ ಸಹ ಕಾರ್ಯದರ್ಶಿ ಶರಣಪ್ಪ ಲೈನದ್, ಕ.ಕಾ.ನಿ.ಪ.ಸಂಘದ ಖಜಾಂಚಿ ಅನೀಲಕುಮಾರ ಕಮ್ಮಾರ, ಕ.ಕಾ.ನಿ.ಪ.ಸಂಘದ ಕಾರ್ಯ ಕಾರಣಿ ಸದಸ್ಯರಾದ ಪರಶಿವಮೂರ್ತಿ ಮಾಟಲದಿನ್ನಿ, ಭೀಮನಗಗೌಡ ಗೌಡ್ರ ಮಾಜಿ ತಾಲೂಕು ಕ.ಸಾಪ.ಅಧ್ಯಕ್ಷ ಚಂದಪ್ಪ ಹಕ್ಕಿ, ಸಾಹಿತ್ಯ ಪರಿಷತ್ ಸದಸ್ಯ ಭರಮಪ್ಪ ಹಂಡೆಕಾರ ಸೇರಿದಂತೆ ಕ.ಕಾ.ನಿ.ಪ.ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.