logo

ವಾಣಿಜ್ಯ ರತ್ನ ಬಸವರಾಜ ಛತ್ರದಗೆ ಬ್ಯಾಡಗಿ ರೋಟರಿ ಕ್ಲಬ್ ವತಿಯಿಂದ ಸನ್ಮಾನ

ಶ್ರೀ ಬಸವರಾಜ ಎಂ ಛತ್ರದ, ಗಣ್ಯ ಒಣ ಮೆಣಸಿನಕಾಯಿ ವರ್ತಕರು,
ಎ ಪಿ ಎಂ ಸಿ ಯಾರ್ಡ್ ಬ್ಯಾಡಗಿ. ಇವರು ದಿನಾಂಕ 10.08.2024 ರಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿಯ 96 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಪ್ರತಿಷ್ಠಿತ " ವಾಣಿಜ್ಯ ರತ್ನ" ಪ್ರಶಸ್ತಿ ಪುರಸ್ಕೃತಗೊಂಡ ಪ್ರಯುಕ್ತ ಸ್ಥಳೀಯ ಬ್ಯಾಡಗಿ ರೋಟರಿ ಸಂಸ್ಥೆಯ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಿ ಕ್ಲಬ್ಬಿನ ಎಲ್ಲ ಪದಾಧಿಕಾರಿಗಳು ಹಾಗು ಸದಸ್ಯರು ಸನ್ಮಾನಿಸಿ ಗೌರವಪೂರ್ವಕ ಅಭಿನಂದನೆ ಸಲ್ಲಿಸಿದರು.
ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಮಾತನಾಡಿ ಬ್ಯಾಡಗಿ ಮಾರುಕಟ್ಟೆಯ ಗಣ್ಯ ವರ್ತಕರನ್ನು ಗುರುತಿಸಿ ಸಮಾಜದಲ್ಲಿ ದೊಡ್ಡ ದೊಡ್ಡ ವರ್ತಕರ ಕೊಡುಗೆಗಳನ್ನು ತಿಳಿಸಿದಲ್ಲಿ ಇನ್ನೂ ಅನೇಕ ವರ್ತಕರಿಗೆ ಪ್ರೋತ್ಸಾಹ ದೊರಕುತ್ತದೆ. ನಮ್ಮ ಮಾರುಕಟ್ಟೆಯ ದೊಡ್ಡ ವರ್ತಕರಿಂದ ಅನೇಕ ಸಾವಿರಾರು ಕುಟುಂಬಗಳು ಜೀವನೋಪಾಯ ನಡೆಸುತ್ತಿವೆ ನಮ್ಮ ಪಟ್ಟಣಕ್ಕೆ ಸ್ಥಳೀಯರಲ್ಲದೆ ಸುತ್ತಲಿನ ಜಿಲ್ಲೆಗಳಿಂದಲೂ ಇಲ್ಲಿ ಬಂದು ಉದ್ಯೋಗ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಮ್ಮ ಬ್ಯಾಡಗಿಯ ಬಸವರಾಜ ಛತ್ರದ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಮಾಡಿದ್ದು ಸ್ವಾಗತಾರ್ಹ ಹಾಗೂ ನಮ್ಮ ಪಟ್ಟಣಕ್ಕೆ ಹೆಮ್ಮೆಯ ವಿಷಯ, ಅದಕ್ಕಾಗಿ ನಮ್ಮ ಎಲ್ಲ ಸದಸ್ಯರೊಂದಿಗೆ ಇಂದು ಅವರ ವ್ಯಾಪಾರಿ ಸ್ಥಳದಲ್ಲೇ ನಮ್ಮ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಸಿದ್ದೇವೆ ಎಂದು ತಿಳಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎಸ್ ಎಂ ಬೂದಿಹಾಳಮಠ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಸದಸ್ಯರಾದ ಬಸವರಾಜ ಸುಂಕಾಪುರ, ವಿಶ್ವನಾಥ ಅಂಕಲಕೋಟಿ, ಮಾಲತೇಶ ಅರಳಿಮಟ್ಟಿ, ಅನಿಲಕುಮಾರ ಬೊಡ್ಡಪಾಟಿ, ಕಲ್ಲಪ್ಪ ಚೂರಿ, ನಿರಂಜನ ಶೆಟ್ಟಿಹಳ್ಳಿ, ಕಿರಣ ವೆರ್ಣೇಕರ್, ಜಗದೀಶ ದೇವಿಹೊಸೂರ, ಮಾಲತೇಶ ಉಪ್ಪಾರ, ಪರಶುರಾಮ ಮೇಲಗಿರಿ, ಪವಾಡೆಪ್ಪ ಆಚನೂರ, ಮಾಲತೇಶ ಕಲ್ಯಾಣಿ, ಸತೀಶ ಅಗಡಿ, ರಮೇಶ ಬನ್ನಿಗಿಡದ, ವಿಜಯಕುಮಾರ ವಾಲಿಶೆಟ್ಟರ, ಇನ್ನಿತರರು ಉಪಸ್ಥಿತರಿದ್ದರು

2
2954 views