logo

ಭಾಷೆಗಳ ಈ ಮಹಾಮೇಳ ಅಗತ್ಯವಿತ್ತು.

ಭಾಷೆ , ಸಾಹಿತ್ಯ , ಸಂಗೀತ , ಸಂಸ್ಕೃತಿ , ಸಿನೆಮಾ , ರಂಗಭೂಮಿ , ಇತಿಹಾಸ , ಸಾಮಾಜಿಕ ಸಂಕಷ್ಟಗಳು , ಶಿಲ್ಪಕಲೆ , ಚಿತ್ರಕಲೆ ಹೀಗೆ ಒಟ್ಟು 45 ವಿಭಾಗಗಳಲ್ಲಿ ಸಂವಾದ , ಚರ್ಚಾಗೋಷ್ಠಿ ನಡೆಸಿದ ಬುಕ್ ಬ್ರಹ್ಮ ಬಳಗದವರು ನಿಜಕ್ಕೂ ಅಭಿನಂದನಾರ್ಹರು.ಮೂರು ದಿನಗಳ ಸಾಹಿತ್ಯ ಉತ್ಸವ ಯಶಸ್ವಿಯಾಗಿ ಕನ್ನಡ ಇತಿಹಾಸ ಪುಸ್ತಕದಲ್ಲಿ ದಾಖಲಾಯಿತು.ಆದರೆ ಎಡಪಂಥೀಯ ವಿಚಾರಧಾರೆ ಹೆಚ್ಚಾಗಿ ಎರಕ ಹೊಯ್ದದ್ದು ತುಸು ಬೇಸರ ತರಿಸಿದರು ಬಾಕಿ ಎಲ್ಲಾ ಅದ್ಭುತವಾದದ್ದು…
- - - - - - - - -

09/08/2024 ರಿಂದ11/08/2024 ( ಶುಕ್ರವಾರ, ಶನಿವಾರ , ರವಿವಾರ )
ಮೂರು ದಿನಗಳ ಬುಕ್ ಬ್ರಹ್ಮ ಲಿಟ್‌ಫೆಸ್ಟ್ ಮುಗಿದಿದೆ.
ದಕ್ಷಿಣ ಬಾರತದ ನಾಲ್ಕು ಪ್ರಮುಖ ಭಾಷೆಗಳನ್ನು ಒಂದು ವೇದಿಕೆಗೆ ತಂದು, ಪರಸ್ಪರ ಕೊಡು-ಕೊಳ್ಳುವಿಕೆಗಳಿಗೆ ಸಾಂಕೇತಿಕವಾದ ಆರಂಭವನ್ನು ನಾನು ಊಹಿಸಿದ್ದಕ್ಕಿಂತಲೂ ಪರಿಣಾಮಕಾರಿಯಾಗಿ ಮಾಡಿದ ಯಶಸ್ಸು ಆತ್ಮೀಯ ಸತೀಶ್ ಚಪ್ಪರಿಕೆ, ದೇವು ಪತ್ತಾರ್ ಮತ್ತವರ ಬಳಗಕ್ಕೆ, ಎಲ್ಲ ಸ್ವಯಂಸೇವಕ ತಂಡಗಳಿಗೆ ಸಲ್ಲುತ್ತದೆ. ಇದು ಎಂದೋ ಆಗಬೇಕಿದ್ದ ಕೆಲಸ.

ಮೂರು ದಿನಗಳಲ್ಲಿ ನಾನು ಅಂದಾಜಿಸಿಕೊಂಡಂತೆ, ಕನಿಷ್ಠ 6000ಕ್ಕೂ ಮಿಕ್ಕಿ ಮಂದಿ, ಆರು ಕಡೆಗಳಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದ ವಿವಿಧ ಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ತಮಿಳು-ತೆಲುಗು-ಮಲೆಯಾಳಂ ಭಾಷಿಗರೂ ಗಮನಾರ್ಹ ಸಂಖ್ಯೆಯಲ್ಲಿ ಗೋಷ್ಟಿಗಳಲ್ಲಿ ಪಾಲ್ಗೊಂಡಿದ್ದರು, ಅವರೂರಲ್ಲಿ ಅವರಿಗೆ ಸರಾಗವಾಗಿ ಕಾಣಸಿಗದ ಅವರ ಭಾಷೆಯ ಮಹತ್ವದ ಲೇಖಕರು ಇಲ್ಲಿ ಅವರಿಗೆ ಹತ್ತಿರದಲ್ಲಿ ಮಾತು-ಕತೆಗೆ ಸಿಕ್ಕರು.

ಪುಸ್ತಕ ಮಾರಾಟ, ಚಿತ್ರಕಲಾ ಪ್ರದರ್ಶನ, ಎಳೆಯರ ಜೊತೆ ಸಂವಹನ, ಪ್ರಕಾಶಕರ ಕಾನ್‌ಕ್ಲೇವ್, ಪುಸ್ತಕಗಳ ಬಿಡುಗಡೆ, ಸ್ಪರ್ಧೆ-ಪುರಸ್ಕಾರ, ವಿವಿಧೆಡೆಗಳಿಂದ ಬಂದಿದ್ದ ಸಾಹಿತ್ಯಾಸಕ್ತರು-ಬರೆಹಗಾರರು-ಕವಿ-ಸಾಹಿತಿಗಳಿಗೆ ಮುಕ್ತವಾಗಿ ಬೆರೆಯಲು ಅವಕಾಶ… ಇವೆಲ್ಲ ನಿಜಕ್ಕೂ ಚೆನ್ನಾಗಿ ಬಳಕೆಯಾದವು ಎಂಬುದು ಮೂರೂ ದಿನಗಳಲ್ಲಿ ಹೆಚ್ಚಿನ ಸಮಯ ಅಲ್ಲಿದ್ದ ನನ್ನ ಅನ್ನಿಸಿಕೆ.

ವಿವಿಧ ಗೋಷ್ಟಿಗಳಿಗೆಂದು ಆಹ್ವಾನಿತರಾಗಿದ್ದ ನಾಡಿನ ಎಲ್ಲೆಡೆಯ ಪರಿಣತರ ಸಂಖ್ಯೆ 216+. ಅವರಲ್ಲಿ ಅನಿವಾರ್ಯ ಕಾರಣಗಳಿಗೆ 2-3 ಮಂದಿ ಬಂದಿಲ್ಲ ಎಂಬುದನ್ನು ಬಿಟ್ಟರೆ, ಬೇರೆಲ್ಲರೂ ಹಾಜರಿದ್ದು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮೂರೂ ದಿನ ಅವರೆಲ್ಲರೂ ಅದೇ ಕ್ಯಾಂಪಸ್ಸಿನಲ್ಲಿ ಒಟ್ಟಾಗಿ ಬದುಕಿದರು.

ದೊಡ್ಡ ದುಡ್ಡು, ಸರ್ಕಾರಿ ದುಡ್ಡು ರಾಶಿ ಹಾಕಿಕೊಂಡು ಅದ್ದೂರಿಯ “ಜಾತ್ರೆ” ನಡೆಸುವ ಬದಲು, ಹನಿ ಹನಿ ಕೂಡಿಸಿ, ಜುಡೀಷಿಯಸ್ ಆಗಿ ಅವನ್ನು ವ್ಯಯಿಸಿ, ಶಿಸ್ತುಬದ್ಧವಾದ, ಸಮಯಬದ್ಧವಾದ, ಅರ್ಥವತ್ತಾದ ಫೆಸ್ಟ್ ಒಂದನ್ನು ಆಯೋಜಿಸಲು ಸಾಧ್ಯವಾದದ್ದು ನಿಜಕ್ಕೂ ದೊಡ್ಡ ಸಂಗತಿ.

4
2239 views