ದುಬೈನಲ್ಲಿ ಕನ್ನಡದ ಕಂದ ಕನ್ನಡ ನಝೀರ್ ರವರಿಗೆ ಸಂದ ಅಂತರಾಷ್ಟ್ರೀಯ ಶಾಂತಿ ಪುರಸ್ಕಾರ ಗೌರವ:
ದುಬೈ : ಸಂಯುಕ್ತ ಅರಬ್ ಸಂಸ್ಥಾನ ದೇಶದಆರ್ಥಿಕ ರಾಜಧಾನಿ ದುಬೈನಲ್ಲಿ ಆಗಸ್ಟ್ 3ರಂದು ನಡೆದ ಖ್ಯಾತ ಅಂತರ್ ರಾಷ್ಟ್ರೀ ಯ ಸಂಘಟನೆ ಹಿಂದೂ ಮುಸ್ಲಿಂ ಕ್ರಿಶ್ಚಿ ಯನ್ ಯುನೈಟೆಡ್ 15 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ 0 ಹಾಗೂ ಸಂಘಟನಾ ಮುಖಂಡರಾದ ಕನ್ನಡ ನಜೀರ್ ಸೇರಿದಂತೆ ಹಲವರಿಗೆ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ದುಬೈ ಯ ಕರಾಮಾದಲ್ಲಿನ ಪಂಚತಾರಾ ಹೋಟೆಲ್ ಪಾರ್ಕ್ ರೆಜಿಸ್ ನಲ್ಲಿ ಜರಗಿದ ವರ್ಣರಂಜಿತ ಸಮಾರಂಭದಲ್ಲಿ ಇಪ್ಪತ್ತೆರಡು ದೇಶಗಳ ವಿವಿಧ ಪ್ರತಿನಿಧಿಗಳೊಂದಿಗೆ ಭಾರ ತದ ನಾಲ್ವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಂಘಟನೆಯ ಸ್ಥಾಪಕರು ಹಾಗೂ ಅಂತರ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಶಕೀಲ್ ಹಸನ್ ಮಾತನಾಡಿ ಸಂಘಟನೆಯನ್ನು ಹದಿನೈದು ವರ್ಷಗಳ ಹಿಂದೆ ಸ್ಥಾಪಿಸಿದ ಸಂಘಟನೆ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದ್ದು . ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರುಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ದುಬೈ ದೇಶದ ರಾಜಮನೆತನದ ಹಿಸ್ ಎಕ್ಸೆಲೆನ್ಸಿ ಮುಹಮ್ಮದ್ ಬಿನ್ ಅಬ್ಬು ಲ್ಲಾ ಅಲ್ ಮಝರೂಕಿ, ಹಿಸ್ ಎಕ್ಸೆಲೆನ್ಸಿ ಜುಮಾ ಅಲ್ ಮದನಿ, ಹರ್ ಎಕ್ಸೆಲೆನ್ಸಿ ಮುನೀರಾ ಅಲ್ ಬಲೂಷಿ, ಇವರೊಂದಿಗೆ ವಿವಿಧಗಣ್ಯರು ಪಾಲ್ಗೊಂಡಿದ್ದರು.ಹಾಗೂ ಕಾರ್ಯಕ್ರಮದಲ್ಲಿ ಸಂಘಟ ನೆಯ ಮುಖಂಡರಾದ ದಾನಿಶ್ ಮುಹ ಮ್ಮದ್, ಹಮೀದ್ ಸಾಗರ, ಸಯ್ಯದ್ ಅಹ ಮದ್ ಬಸ್ಸುರು ಉಪಸ್ಥಿತರಿದ್ದು ಕಾರ್ಯ ಕ್ರಮದಲ್ಲಿ ಹಗಲಿರುಳು ದುಡಿದರನ್ನು ಕೂಡ ಸನ್ಮಾನಿಸಲಾಯಿತು.ವರದಿ: ಹುಸೇನ್ ಪೀರಾ ದೊಡ್ಡಮನೆ,ಎ ಐ ಎ ಎಂ ನ್ಯೂಸ್ , ಬಳ್ಳಾರಿ ಜಿಲ್ಲಾ ವರದಿಗಾರರು ,9916730456,7337774040