logo

ಮೈಸೂರು ಚಲೋ ಪಾದಯಾತ್ರೆ ಇಂದಿನಿಂದ ಅಧಿಕೃತ ಚಾಲನೆ ದೊರೆಯಿತು.

ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ , NDA ಒಕ್ಕೂಟದ ಅಡಿಯಲ್ಲಿ ಮೈಸೂರು ಚಲೋ ಎಂಬ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮೈಸೂರು ಮೂಡಾ ದವರು ಅಕ್ರಮವಾಗಿ , ಹಾಗು ನಗರಾಭಿವೃದ್ಧಿ ನಿಯಮಗಳನ್ನು ಗಾಳಿಗೆ ತೂರಿ 14 ಸೈಟುಗಳನ್ನು ನೀಡಿದ್ದಾರೆ , ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ಹಾಗು ಒಟ್ಟು ಮೂಡಾದಲ್ಲಿ ಮೂರು ಸಾವಿರ ಕೋಟಿಗೂ ಮಿಗಿಲಾಗಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಇಂದು ಬಿಜೆಪಿ , ಜೆಡಿಸ್ ನವರು ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆಯನ್ನು ನಡೆಸಿದ್ದಾರೆ ಅದಕ್ಕೆ ಇಂದು ಕೆಂಗೇರಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಯಡಿಯೂರಪ್ಪನವರು ಹಾಗು ಜೆಡಿಎಸ್ ನಿಂದ ಕೇಂದ್ರದ ಮಂತ್ರಿಗಳಾದ ಕುಮಾರಸ್ವಾಮಿಯವರು ನಗಾರಿ ಬಾರಿಸುವುದರ ಮೂಲಕ ಅಧಿಕೃತ ಚಾಲನೆ ಮಾಡಿದರು.ಬಿಜೆಪಿಯ ಬಸವರಾಜ ಬೊಮ್ಮಾಯಿ , ಆರ್.ಅಶೋಕ್ , ಅಶ್ವತ್ಥ ನಾರಾಯಣ , ಶೋಭಾ ಕರಂದ್ಲಾಜೆ , ಪ್ರತಾಪ ಸಿಂಹ , ಬಿಜೆಪಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಇನ್ನೂ ಅನೇಕ ರಾಜಕೀಯ ಮುಖಂಡರು , ಜೆಡಿಎಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು.

0
3805 views