
ಐತಿಹಾಸಿಕ ಚೆನ್ನಮ್ಮನ ಕಿತ್ತೂರು ನಗರ ಆಕರ್ಷಕ ಮಾಡಲು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ರಾಜಮಾರ್ಗದ ರಸ್ತೆ ಅಗಲೀಕರಣಕ್ಕೆ ಮನೆ ತೆರವು ಕಾರ್ಯಾಚರಣೆಗೆ ಚಾಲನೆ
ಚನ್ನಮ್ಮನ ಕಿತ್ತೂರು : ಒಂದು ನಗರವು ಅಭಿವೃದ್ಧಿಯಾಗಲು ಅಲ್ಲಿನ ಶಿಕ್ಷಣ, ರಸ್ತೆಗಳು ಸಾರಿಗೆ ವ್ಯವಸ್ಥೆ ಉತ್ತಮವಾಗಿರಬೇಕು. ಆದರೆ, ಕಿತ್ತೂರು ನಗರವು ಜಿಲ್ಲೆಯಲ್ಲಿ ಪ್ರಮುಖ ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವಾಗಿದ್ದರೂ, ಒಂದು ದೊಡ್ಡ ಹಳ್ಳಿಯಂತೆ ಇದೆ.
ಆದ್ದರಿಂದ ಈಗಿನ ಜನಪ್ರಿಯ ಶಾಸಕ ಬಾಬಾ ಸಾಹೇಬ್ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಯವರ ಹಿತಾಸಕ್ತಿಯಿಂದ ಶತಮಾನದಿಂದ ನೆನೆಗುಂಡಿಗೆ ಬಿದ್ದಿದ್ದ ಪ್ರೊಜೆಕ್ಟ್ ಮರಳಿ ಜೀವ ಬಂದಿದೆ ರಸ್ತೆ ತೆರವುಗೊಳಿಸಿದ ನಂತರ ಕುಡಿಯುವ ನೀರು, ವಿದ್ಯುತ್ ಪೂರೈಕೆ ಪೈಪ್‌ಗಳು ನೆಲದಡಿಯಲ್ಲಿ ಹಾಕಲಾಗುವುದು. ಐತಿಹಾಸಿಕ ಕಿತ್ತೂರು ಪಟ್ಟಣವನ್ನು ಆಕರ್ಷಕವಾಗಿ ಮಾಡಲು ಈ ಕಾಮಗಾರಿ ನಡೆಸುವುದು ಅನಿವಾರ್ಯವಾಗಿತ್ತು ಎಂದು ಪಂಚಾಯತಿ ಮೂಲಗಳು ತಿಳಿಸಿವೆ. ರಸ್ತೆ ಅಗಲೀಕರಣಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.
ರಸ್ತೆ ಅಗಲೀಕರಣಕ್ಕಾಗಿ ಮನೆ ತೆರವು ಕಾರ್ಯಾಚರಣೆಗೆ ಚಾಲನೆ ಕಿತ್ತೂರು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ರಾಜಮಾರ್ಗದ ರಸ್ತೆ ಅಗಲೀಕರಣಕ್ಕೆ ಮನೆ ತೆರವು ಕಾರ್ಯಾಚರಣೆಗೆ ಶನಿವಾರ ಮಧ್ಯಾಹ್ನ ಹಠಾತ್ತನೇ ಚಾಲನೆ ನೀಡಿದರು. ಮುಂಜಾನೆಯೇ ಸ್ಥಳದಲ್ಲಿ ಬಂದು ನಿಂತಿದ್ದ ಜೆಸಿಬಿ ಯಂತ್ರವು ಪಟ್ಟಣ ಪಂಚಾಯ್ತಿಯವರು ಗುರುತು ಹಾಕಿದ್ದ ಜಾಗೆಯವರೆಗೆ ಗೋಡೆಗಳನ್ನು ನೆಲಸಮಗೊಳಿಸಲು ಪ್ರಾರಂಭಿಸಿತ್ತು ಸಾರ್ವಜನಿಕರು ಹಾಕಿದ್ದ ತಗಡಿನ ಶೆಡ್ ಕಿತ್ತು ಹಾಕಲಾಯಿತು. ಈ ಹಿಂದೆ ಮನೆಗಳನ್ನು ತೆರವುಗೊಳಿಸಲು ನಿರಾಕರಿಸಿದ್ದ ಕೆಲವು ಕುಟುಂಬಗಳು ಮೊದಲು ಒಪ್ಪದೇ ಹೋದವು. ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಕಿರಿಯ
ಇಂಜನಿಯರ್ ವೆಂಕಟೇಶ್ ಕಾಮಣ್ಣವರ ಜೊತೆಗೆ ಒಬ್ಬರು ವಾದವನ್ನೂ ನಡೆಸಿದರು. ಅವರ ಮನವೊಲಿಸಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು.
ಇದಕ್ಕೆ ಮೊದಲು ಶಾಸಕ ಬಾಬಾಸಾಹೇಬ ಪಾಟೀಲ ನೇತೃತ್ವದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವ ಬೀದಿಯಲ್ಲಿ ಬರುವ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆಯನ್ನೂ ನಡೆಸಿ ಅವರ ಮನವೊಲಿಸುವ ಕೆಲಸ ಮಾಡಲಾಗಿತ್ತು. ಮನೆ, ಅಂಗಡಿ ತೆರವು ಕಾರ್ಯಾಚರಣೆಯ ಸ್ಥಳದಲ್ಲಿ ಕಿತ್ತೂರು ಪಿಎಸ್‌ಐ ಪ್ರವೀಣ ಗಂಗೋಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.