logo

28 ರಂದು ಬಿಜೆಪಿ ಪ್ರತಿಭಟನೆ

ಸಿಂದಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರದ ವಿರುದ್ದ ಜೂ. 28 ರಂದು ಪ್ರತಿಭಟನೆ ನಡೆಸಲು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕು ಎಸ್.ಟಿ. ಮೋರ್ಚಾ ವತಿಯಿಂದ ನಡೆದ ಪೂರ್ವಭಾವಿ ಸಭೆ ನಿರ್ಧರಿಸಲಾಯಿತು. ಸಭೆಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಒಬಿಸಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ರವಿ ವಗ್ಗಿ, ಪ್ರಧಾನ ಕಾರ್ಯದರ್ಶಿ ಭರತ್ ಕೋಳಿ, ತಾಲೂಕು ಅಧ್ಯಕ್ಷ ಪ್ರಶಾಂತ ಕದ್ದರಗಿ, ಮುಖಂಡರಾದ ಅನೀಲ ಜಮಾದಾರ, ಪ್ರ. ಕಾರ್ಯದರ್ಶಿ ಭಾಗಣ್ಣ ಕೊಟ್ಟಿಗೊಳ, ಶಿವು ಗುರಿಕಾರ, ರಾಜು ದ್ಯಾಬೇರಿ, ನೀಲಮ್ಮ ಯಡ್ರಾಮಿ ಮತ್ತಿತರರಿದ್ದರು.

134
3811 views