
ಮಹಾರಾಷ್ಟ್ರ & ಗೋವಾ ರಾಜ್ಯದಲ್ಲಿ ಅನೇಕ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸ್‌ರಿಂದ ತಲೆಮರೆಸಿಕೊಂಡು ತಿರುಗುತ್ತಿದ್ದು, ರೌಡಿ ವಿಶಾಲ ಸಿಂಗ್ ಚವ್ಹಾನ್ ಬಂಧಿಸುವಲ್ಲಿ ಯಶಸ್ವಿ
ಬೆಳಗಾವಿ : ಚೆನ್ನಮ್ಮನ ಕಿತ್ತೂರು ತಾಲ್ಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ ರೌಡಿ ವಿಶಾಲ ಸಿಂಗ್ ಚವ್ಹಾನ್ (25) (ಸದ್ಯ ಕದಮ ಬಿಲ್ಡಿಂಗ್ ಶಾಸ್ತ್ರಿ ನಗರ, ಬೆಳಗಾವಿ) ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಂದ ತಲೆಮರೆಸಿಕೊಂಡು ತಿರುಗುತ್ತಿರುವ ರೌಡಿ ವಿಶಾಲ ಸಿಂಗ್ ಚಾವ್ಹಾನ್ ಈತನನ್ನು ಪತ್ತೆ ಹಚ್ಚಿ, ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
ಬೆಳಗಾವಿ ಮತ್ತು ಪಕ್ಕದ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ಮಾಡಿ ಮೂರೂ ರಾಜ್ಯಗಳ ಪೊಲೀಸರ ಕೈಗೆ ಸಿಗದೇ ತನ್ನ ವ್ಯವಹಾರಗಳಿಗೆ ಕೇವಲ ವಾಟ್ಸ ಆಯಪ್, ಇನ್ಸ್ಟಾಗ್ರಾಮ್ ಇತರ ಆಯಪ್ಗಳನ್ನು ಬಳಸಿ ತಲೆಮರೆಸಿಕೊಂಡು ತಿರುಗುತ್ತಿದ್ದ ಆತನ ಬಂಧನಕ್ಕಾಗಿ ರೋಹಣ ಜಗಧೀಶ ಐ, ಡಿಸಿಪಿ (ಕಾ&ಸು) ರವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿದೆ. ಈ ತಂಡದ ಸದಸ್ಯರಾದ ಕಿರಣ ಹೊನಕಟ್ಟಿ ಪಿಎಸ್‌ಐ ಉದ್ಯಮಭಾಗ ಆತನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೌಡಿ ವಿಶಾಲ ಸಿಂಗ್ ಈತನ ವಿರುದ್ಧ ಕೊಲೆ ಪ್ರಕರಣ-1, ಕೊಲೆಗೆ ಯತ್ನ ಪ್ರಕರಣಗಳು-5, ಆಯುಧ ಕಾಯ್ದೆ ಪ್ರಕರಣ-1, ಹಣಕ್ಕಾಗಿ ಅಪಹರಣ ಪ್ರಕರಣ-1, ಸುಲಿಗೆ ಪ್ರಕರಣ-1, ಗಡಿಪಾರು ಆದೇಶ ಉಲ್ಲಂಘನೆ & ಮುಂಜಾಗ್ರತಾ ಕ್ರಮ-2, ಮಹಾರಾಷ್ಟ್ರ ರಾಜ್ಯದಲ್ಲಿ ಕೊಲೆಗೆ ಯತ್ನ ಮತ್ತು ಆಯುಧ ಕಾಯ್ದೆ ಪ್ರಕರಣ -2, ಗೋವಾ ರಾಜ್ಯದಲ್ಲಿ ಕಳ್ಳತನ ಪ್ರಕರಣ-1 ಹೀಗೆ ಒಟ್ಟು-14 ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ ರವರು ಆತನ ವಿರುದ್ಧದ ಎಲ್ಲ ಪ್ರಕರಣಗಳ ಸ್ವರೂಪ, ಅದರ ಗಂಭೀರತೆ ಹಾಗೂ ಸಮಾಜದಲ್ಲಿ ಇಂತಹ ರೌಡಿ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಭಂಗ ಹಾಗೂ ಅಪರಾಧಿಕ ಪರಿಸರದ ಬಗ್ಗೆ ದಿನಾಂಕ.29/05/2024 ರಂದು ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ, 03 ನ್ಯಾಯಾಧೀಶರ ಅಡ್ವೈಜರಿ ಬೋರ್ಡನಲ್ಲಿ ಗೂಂಡಾ ಕಾಯ್ದೆಯ ಅವಶ್ಯಕತೆಗಳ ಕುರಿತು ಅಚ್ಚುಕಟ್ಟಾಗಿ ಮಂಡಿಸಿ, ನ್ಯಾಯಾಲಯದಿಂದಲೂ ಈ ಆದೇಶವನ್ನು ನೀಡಲಾಗಿದೆ. ಧೃಡಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪೊಲೀಸ್ ಕಮೀಷನರೇಟ್ ಬೆಳಗಾವಿಯ ಮೊದಲ ಪ್ರಕರಣಕ್ಕೆ.
ಇದೇ ರೀತಿ ಬೆಳಗಾವಿಯಲ್ಲಿ ಇಂತಹ ಗೂಂಡಾ ವರ್ತನೆಯಿಂದ ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇನ್ನೂ 3-4 ಜನರ ವಿರುದ್ಧ ಹಲವಾರು ಪ್ರಕರಣಗಳು ಸಹ ದಾಖಲಾಗಿದ್ದು, ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸುತ್ತಾರೆ.
ವಿಶಾಲ್ ಸಿಂಗ್ ಚೌಹಾಣ್ ಇದೀಗ ಗುಲ್ಬರ್ಗಾ ಜೈಲಿನಲ್ಲಿದ್ದಾನೆ. ಪೊಲೀಸ್ ಕಮಿಷನರ್ ಐಡಾ ಮಾರ್ಟಿನ್ ಸರ್ ಅವರ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ ಮತ್ತು ಅದನ್ನು ಹೈಕೋರ್ಟ್ 3 ನ್ಯಾಯಾಧೀಶ ಪೀಠದ ಮುಂದೆ ದೃಢಪಡಿಸಿದ್ದಾರೆ. ಕರ್ನಾಟಕ, ಗೋವಾ ಮತ್ತು ಎಂಎಚ್‌ನ 3 ರಾಜ್ಯಗಳಲ್ಲಿ ಈತನಿಗೆ 14 ಹೇಯ ಅಪರಾಧ ಪ್ರಕರಣಗಳಿವೆ. ಈತ ಕೊಲೆ, ಕೊಲೆ ಯತ್ನ, ಸುಲಿಗೆಗಾಗಿ ಅಪಹರಣ, ದರೋಡೆ, ಸುಪಾರಿ, ಶಸ್ತ್ರಾಸ್ತ್ರ ಕಾಯ್ದೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಬೆಳಗಾವಿ ನಗರ ಪೊಲೀಸರು ಇಂತಹ ಗೂಂಡಾ ಕಾಯ್ದೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಅಂಗೀಕರಿಸಿರುವುದು ಇದೇ ಮೊದಲು. ಈ ಶ್ರಮಿಸುತ್ತಿರುವ ನಮ್ಮ ಇಡೀ ತಂಡವನ್ನು ನಾವು ಅಭಿನಂದಿಸುತ್ತೇವೆ” ಎಂದು ಡಿಸಿಪಿ ಸ್ನೇಹಾ ಪಿವಿ.
ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಐಪಿಎಸ್, ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರ ಮಾರ್ಗದರ್ಶನ ಹಾಗೂ ರೋಹನ ಜಗದೀಶ ಐಪಿಎಸ್. ಡಿಸಿಪಿ (ಕಾ&ಸು) ಬೆಳಗಾವಿ ನಗರ ರವರ ನೇತೃತ್ವದಲ್ಲಿ ಸದಾಶಿವ ಕಟ್ಟಿಮನಿ ಎಸಿಪಿ ಅಪರಾಧ & ಶೇಖರಪ್ಪ ಎಚ್, ಎಸ್ಸಿಪಿ ಖಡೇಬಜಾರ ಹಾಗೂ ಕಿರಣ ಹೊನಕಟ್ಟಿ ಪಿಎಸ್‌ಐ ಉದ್ಯಮಬಾಗ ರವರ ಸತತ ಪ್ರಯತ್ನದಿಂದಾಗಿ ಕುಖ್ಯಾತ ರೌಡಿ ವಿಶಾಲ ಸಿಂಗ್ ಚವ್ಹಾಣ (25) ಸಾ. ಕದಮ ಬಿಲ್ಡಿಂಗ್ ಶಾಸ್ತ್ರಿ ನಗರ, ಬೆಳಗಾವಿ ಈತನ ಹೆಡಮುರಿ ಕಟ್ಟುವಲ್ಲಿ ಬೆಳಗಾವಿ ನಗರ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.