
ಬೆಳಗಾವಿ: ₹1,40,000ಕ್ಕೆ 30 ತಿಂಗಳ ಹಸುಗೂಸು ಮಾರಾಟಕ್ಕೆ ಯತ್ನಿಸಿದ ಐವರು ಈಗ ಪೊಲೀಸರ ಅತಿಥಿಗಳು
ಬೆಳಗಾವಿ, ಜೂನ್, 10: ಕೇವಲ 30 ದಿನದ ಹೆಣ್ಣು ಮಗುವನ್ನು ಮಾರಾಟ ಯತ್ನಿಸಿದ್ದು, ಈ ವೇಳೆ ಐವರನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ನಗರದಲ್ಲಿ ಮಗು ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಐವರನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರಾದ ರಾಜಕುಮಾರ ಸಿಂಗಪ್ಪಾ ರಾಠೋಡ ದೂರಿನ ಮೇರೆಗೆ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಬ್ದುಲಗಫಾರ ಲಾಡಖಾನ ತಾ.ಸವದತ್ತಿ ಹಾಲಿ ಸೋಮವಾರ ಪೇಠ ಕಿತ್ತೂರ ಇವನಿಂದ 60,000ಕ್ಕೆ ಮಗು ಪಡೆದುಕೊಂಡಿದ್ದಾನೆ. ಬಳಿಕ ಬೆಳಗಾವಿಯಲ್ಲಿ ಆ ಮಗುವನ್ನ 1,40,000 ರೂಪಾಯಿ ಮಾರಾಟ ಮಾಡಲು ಯತ್ನಿಸಿದೆ. ಇನ್ನು ಈ ಜಾಲವನ್ನು ರಹಸ್ಯ ಕಾರ್ಯಾಚರಣೆ ಮೂಲಕ ಪೋಲಿಸರು ಭೇದಿಸಿ ಆರೋಪಿಗಳನ್ನು ಮಟ್ಟಹಾಕುವ ಕೆಲಸ ಮಾಡಿದ್ದಾರೆ.
1) ಮಹಾದೇವಿ @ ಪ್ರಿಯಾಂಕಾ ಬಾಹುಬಲಿ ಜೈನ್ ಸಾ: ನೇಗಿನಹಾಳ ತಾ: ಬೈಲಹೊಂಗಲ
2) ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ,
3) ಚಂದನ ಗಿರಿಮಲ್ಲಪ್ಪಾ
ಸುಭೇಧಾರ ಸಾ: ತುರಕರ ಶೀಗಿಹಳ್ಳಿ ತಾ: ಬೈಲಹೊಂಗಲ,
4) ಪವಿತ್ರಾ ತಂದೆ ಸೋಮಪ್ಪಾ ಮಡಿವಾಳರ ಸಾ: ಸಂಪಗಾಂವ ತಾ: ಬೈಲಹೊಂಗಲ,
5) ಪ್ರವೀಣ ಮಂಜುನಾಥ ಮಡಿವಾಳರ ಸಾ:
ಹೊಸಟ್ಟಿ ತಾ: ಧಾರವಾಡ ಇವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಮಗುವನ್ನ ವಶಕ್ಕೆ ಪಡೆದುಕೊಂಡ ಪೋಲಿಸರು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಪೋಲಿಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದಶ್, ಡಿಸಿಪಿ ಪಿ.ವಿ.ಸ್ನೇಹಾ, ಇನ್ಸ್‌ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಇವರ ಮಾರ್ಗದರ್ಶನದಲ್ಲಿ ಸಬ್ಇನ್ಸ್‌ಪೆಕ್ಟರ ರಾಮಗೌಡ ಸಂಕನಾಳ ಸಿಬ್ಬಂದಿ ಕೆ.ಬಿ.ಗೌರಾಣಿ ಮತ್ತು ಜಾಸ್ಮಿನ ಮುಲ್ಲಾ ಈ ಕಾರ್ಯಾಚರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.