ಗ್ರಾಹಕರಿಗೆ ಅಮುಲ್ ಕಂಪನಿಯಿಂದ ಬಿಗ್ ಶಾಕ್ !
ಗ್ರಾಹಕರಿಗೆ ಅಮುಲ್ ಕಂಪನಿಯಿಂದ ಬಿಗ್ ಶಾಕ್ !
ಗ್ರಾಹಕರಿಗೆ ಅಮುಲ್ ಕಂಪನಿ ಬೆಲೆ ಏರಿಕೆಯ ಶಾಕ್ ಕೊಟ್ಟಿದೆ.ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಬೆಲೆ ಏರಿಕೆ ಸೋಮವಾರದಿಂದಲೇ (ಜೂನ್ 3) ಜಾರಿಗೆ ಬರಲಿದೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ, ಅಮುಲ್ ಟೀ ಸ್ಪೆಷಲ್ ಬೆಲೆಯಲ್ಲಿ ಏರಿಕೆ ಕಂಡಿದೆ.
ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದ ದೃಷ್ಟಿಯಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.ಜಿಸಿಎಂಎಂಎಫ್ ಪ್ರಕಾರ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯನ್ನು ಅಮುಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. 'ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ರೈತರನ್ನು ಪ್ರೋತ್ಸಾಹಿಸುತ್ತದೆ' ಎಂದು ಹೇಳಿದೆ.
ಬೆಲೆ ಏರಿಕೆಯೊಂದಿಗೆ 500 ಎಂಎಲ್‌ನ ಅಮುಲ್ ಎಮ್ಮೆ ಹಾಲು, 500 ಎಂಎಲ್‌ನ ಅಮುಲ್ ಗೋಲ್ಡ್ ಹಾಲು ಮತ್ತು 500 ಎಂಎಲ್‌ನ ಅಮುಲ್ ಶಕ್ತಿ ಹಾಲಿನ ದರ ಕ್ರಮವಾಗಿ 36 ರೂ., 33 ರೂ. ಮತ್ತು 30 ರೂ. ಆಗಲಿದೆ. 'ಪ್ರತಿ ಲೀಟರ್‌ಗೆ 2 ರೂ.ಗಳ ಹೆಚ್ಚಳದೊಂದಿಗೆ ದರ ಶೇ. 3-4ರಷ್ಟು ಅಧಿಕವಾಗಲಿದೆ.