logo

Tahsildar: ಲೋಕಾಯುಕ್ತರ ಬಂಧಿ, ಅಜಿತ್‌ ರೈ ‘1368’ ನಂಬರ್ ರಹಸ್ಯ ಬಯಲು! ಸಸ್ಪೆಂಡ್‌‌, ವರ್ಗಾವಣೆ, ಹಿಂಬಡ್ತಿ ಶಿಕ್ಷೆ!

ಬೆಂಗಳೂರು: ಅಜಿತ್‌ ರೈ, ಬಂಧಿತ ತಹಶೀಲ್ದಾರ್‌ (Tahsildar). ಆದರೆ ಈಗ ಸಸ್ಪೆಂಡೆಡ್‌‌ ತಹಶೀಲ್ದಾರ್‌. ಅಷ್ಟೇ ಅಲ್ಲ ಲೋಕಾಯುಕ್ತರು (Lokayukta) ಬಂಧಿಸಿದ ಬಳಿಕ ಗ್ರೇಡ್‌‌ 1 ರಿಂದ ಗ್ರೇಡ್‌ 2ಗೆ ಹಿಂಬಡ್ತಿ ಮಾಡಲಾಗಿದೆ. ಇದರ ಜೊತೆಗೆ ಅಜಿತ್‌ ರೈ (Ajith Rai) ಅದೃಷ್ಟದ ಆಟ ಹೇಗಿತ್ತು ನಾವು ಹೇಳ್ತೀವಿ ಓದಿ. ಕೆಆರ್ ಪುರ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಮೇಲೆ ಲೋಕಾಯುಕ್ತ ರೇಡ್ ಮಾಡಿ ಬಂಧಿಸಿದ ಬಳಿಕ ಸರ್ಕಾರ (Govt) ಅಮಾನತು ಮಾಡಿ ಆದೇಶಿಸಿದೆ. ಲೋಕಾಯುಕ್ತ ದಾಳಿಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದ್ದರಿಂದ ತಹಶೀಲ್ದಾರ್ ಗ್ರೇಡ್‌ 1 ಹುದ್ದೆಯಿಂದ ಗ್ರೇಡ್‌2 ಹುದ್ದೆಗೆ ಹಿಂಬಡ್ತಿ ಮಾಡಲಾಗಿದೆ. ಜೊತೆಗೆ ರಾಯಚೂರಿನ (Raichuru) ಸಿರವಾರಕ್ಕೆ ವರ್ಗಾವಣೆ ಮಾಡಲಾಗಿದೆ.

47
3262 views