logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶ್ರೀ ಕೃಷ್ಣ ಭಕ್ತರೂ ಭಾರತ ತಂಡದ ಮಾಜಿ ಕ್ರಿಕೆಟ್ಆಟಗಾರ ಶ್ರೀ ರವಿಶಾಸ್ತ್ರಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿನೀಡಿ ಶ್ರೀ ಕೃಷ್ಣ ದೇವರ ದರ್ಶನ ಪಡೆದರು

ಉಡುಪಿ ಶ್ರೀ ಪುತ್ತಿಗೆ ವಿಶ್ವ ಗೀತಾ ಪರ್ಯಾಯ 2024-2026
ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ ಶ್ರೀ ರವಿಶಾಸ್ತ್ರಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿನೀಡಿ ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರೀಯ ಶ್ರೀಪಾದರಿಂದ ಅನುಗ್ರಹ ಪಡೆದರು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀಪಾದರ ಮುಖ್ಯ
ಯೋಜನೆಗಳಲ್ಲೊಂದಾದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿ ಮೆಚ್ಚುಗೆ ವ್ಯ್ತಪಡಿಸಿದ್ದಾರೆ.

ಪೂಜ್ಯ ಪುತ್ತಿಗೆ ಕಿರಿಯ ಶ್ರೀಪಾದರು ಉಡುಪಿಯ ಬಾಲ ಕೃಷ್ಣನಿಗೆ ವಿಧ ವಿಧದ ಅಲಂಕಾರ ಮಾಡುತ್ತ ನೂರನೆಯ ಅಲಂಕಾರದ ದಿನವಾದ ಇಂದು ಕ್ರಿಕೆಟ್ ಲೋಕದಲ್ಲಿ ಶತಕ ಬಾರಿಸಿ ಶತಕ ಖ್ಯಾತಿಯ ಶ್ರೀ ಕೃಷ್ಣ ಭಕ್ತರೂ ಆದ ರವಿಶಾಸ್ತ್ರಿಗಳು ಬಂದು ಆಶೀರ್ವಾದ ಪಡೆದದ್ದು ಯೋಗಾಯೋಗವಾಗಿದ್ದು ಅಚ್ಚರಿ ಉಂಟಾಗಿದೆ ಎಂದು ಶ್ರೀಪಾದರು ಅಭಿಪ್ರಾಯಪಟ್ಟರು.
ಶಾಸ್ತ್ರಿಗಳು ಸ್ವಯಂ ಸ್ಪೂರ್ತಿಯಿಂದ ಭಕ್ತರಿಗೆ ಭಗವದ್ಗೀತೆ ಬರೆಯಲು ತಮ್ಮ ಸಂದೇಶ ನೀಡಿದರು.

142
8933 views

Comment