logo

ಅಧಿಕಾರದ ಅಹಂಕಾರದಿಂದ ಸಮಸ್ಯೆಗೆ ಸ್ಪಂದಿಸದೆ ನಡೆದುಕೊಳ್ಳುತ್ತಿರುವ ಬೆನಕನಹಳ್ಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳು.

*ಅಧಿಕಾರದ ಅಹಂಕಾರದಿಂದ ಸಮಸ್ಯೆಗೆ ಸ್ಪಂದಿಸದೆ ನಡೆದುಕೊಳ್ಳುತ್ತಿರುವ ಬೆನಕನಹಳ್ಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳು.*

ಸೇಡಂ:- ಬೇನಕನಹಳ್ಳಿ ಗ್ರಾಮದ ಶ್ರೀ ಚಂದಣೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಹದಿಗೆಟ್ಟಿ ಊರಿನ ಜನರಿಗೆ ತಿರುಗಾಡಲು ತುಂಬಾ ಸಮಸ್ಯೆ ಆಗಿರುವುದನ್ನು ಅನೇಕ ಬಾರಿ ವರದಿ ಮಾಡಲಾಗಿದೆ ಹಾಗೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಇದನ್ನು ಕಂಡರೆ ಸ್ಥಳೀಯ ಶಾಸಕರು ಆಕಡೆ ಗಮನ ಕೊಡ್ತಿಲ್ಲವೆಂದು ಸ್ಪಷ್ಟವಾಗಿ ಕಾಣುತ್ತಿದೆ.

ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ವಿಶೇಷವಾದ ಹೆಸರಿದೆ ಜಿಲ್ಲೆಯಲ್ಲಿ ಎಲ್ಲೂ ಮಾಡದೆ ಹಾಗೆ ಹಿಂದೂ ಸಂಪ್ರದಾಯ ಪ್ರಕಾರ ಮಣ್ಣಿನ ಗಣಪತಿ ಮಾಡಿ ವಿಶೇಷ ಪೂಜಗಳನ್ನು ಸಲ್ಲಿಸಿ 21 ದಿನಗಳ ಕಾಲ ನಡೆಯುವ ಏಕೈಕ ಹಬ್ಬ ಆಗಿರುತ್ತದೆ ಅಂಥಹ ಗ್ರಾಮಕ್ಕೆ ಈ ತರಹದ ಸಮಸ್ಯೆಗಳು ಬರುವುದು ನೋವಿನ ಸಂಗತಿ ಎಂದು ಹೇಳಬಹುದು.

ಪತ್ರಿಕೆಗಳಿಗೆ ಸ್ಪಂದಿಸಿಲ್ಲ, ಮನವಿ ಪತ್ರಗಳಿಗೆ ಸ್ಪಂದಿಸಿಲ್ಲ ಅಂದ್ರೆ ಅಧಿಕಾರಿಗಳು ಎಷ್ಟು ದುರಹಂಕರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟ ವಾಗಿ ತಿಳಿದು ಬರುತ್ತಿದ್ದೆ.

ಇದನ್ನು ಕೂಡಲೇ ಮಾನವ ಸಂಪನ್ಮೂಲ ಹಕ್ಕುಗಳ ಆಯೋಗಕ್ಕೆ ನಾನು ತನಿಖೆ ನಡೆಸಲು ತಿಳಿಸುವೆ.

ಸ್ಪಂದಿಸಿ ಸರಿಯಾದ ಪರಿಹಾರ ಕಲ್ಪಿಸಿ ಕೊಟ್ಟರೆ ಒಳ್ಳೇದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವೇ ಮಾಡಲಾಗುತ್ತದೆ ಎಂದು ಸ್ಥಳೀಯರ ಅಭಿಪ್ರಾಯ ಕೂಡ ಆಗಿರುತ್ತದೆ.

ಕೂಡಲೇ ಬೆನಕನಹಳ್ಳಿ ಗ್ರಾಮದ ಮರಾಗಮ್ಮ ದೇವಸ್ಥಾನದಿಂದ ಚಂದನೇಶ್ವರ ದೇವಸ್ಥಾನವರೆಗೆ ರಸ್ತೆಯನ್ನು ಸರಿಪಡಿಸಲು ಮನವಿ ಆಗಿರುತ್ತದೆ ಎಂದು ಸ್ಥಳೀಯರ ಆಕ್ರೋಶ.

ಬ್ಯೂರೋ ನ್ಯೂಸ್ ಸೇಡಂ.

135
12563 views