ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ವತಿಯಿಂದ ರಮಜಾನ ಹಬ್ಬದ ನಿಮಿತ್ತ ಮಕ್ಕಳಿಗಾಗಿ ಕೇರಂ ಫಂದ್ಯಾವಳಿ ಆಯೋಜನೆ
ಗೋಕಾಕ ಏ 10 : ಇಲ್ಲಿನ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ವತಿಯಿಂದ ರಮಜಾನ ಹಬ್ಬದ ನಿಮಿತ್ತ ಮಕ್ಕಳಿಗಾಗಿ ರವಿವಾರದಂದು ಆಯೋಜಿಸಿದ್ದ ಕೇರಂ ಪಂದ್ಯಾವಳಿಯಲ್ಲಿ ವಿಜೇತ ಜೋಡಿಗಳಿಗೆ ಬಹುಮಾನ ವಿತರಿಸಲಾಯಿತು.
ಜಮೀಲ ಮತ್ತು ಆರ್ಫಾ ಪ್ರಥಮ ಸ್ಥಾನ, ಅನಸ ಮತ್ತು ಮಹ್ಮದ್ ಕೈಫ್ ದ್ವಿತೀಯ ಸ್ಥಾನ ಹಾಗೂ ಜೇಬಾ ಮತ್ತು ಸಬಾ ತೃತೀಯ ಸ್ಥಾನ ಪಡೆದು ಆಕರ್ಷಕ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸಾದಿಕ ಹಲ್ಯಾಳ, ಅಲ್ತಾಫ್ ನಾಸವಾಲೆ, ಗಫಾರ ನಧಾಫ, ಅಸ್ಲಂ ನಾಸವಾಲೆ , ಯಾಕೂಬ್ ಮುಜಾವರ ಉಪಸ್ಥಿತರಿದ್ದರು.