logo

ಯದುವೀರ್ ರಾಜನಾಗಿದ್ದರು ಕೂಡ ಅವರ ಹೆಸರಿನಲ್ಲಿ ಒಂದೇ ಒಂದು ಬೈಕ್, ಕಾರು, ಸೇರಿದಂತೆ ಯಾವುದೇ ವಾಹನ ಹೊಂದಿಲ್ಲ...

*ಅರಮನೆಯಲ್ಲಿರುವ ಯುವರಾಜನಿಗೆ ಸ್ವಂತ ಮನೆಯೇ ಇಲ್ಲ.* !!!
ಯದುವೀರ್‌ ಒಡೆಯರ್‌ ಆಸ್ತಿ ಘೋಷಣೆ: ಸ್ವಂತ ಕಾರು, ಜಮೀನು ಇಲ್ಲದ ಅರಮನೆ ಒಡೆಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಜ್ಯೋತಿಷಿಗಳ ಸೂಚನೆಯಂತೆ ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ‌ ಶ್ರೀವತ್ಸ ಜೊತೆ ಸೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಏಪ್ರಿಲ್‌ 3ರಂದು ಬೃಹತ್‌ ರ‍್ಯಾಲಿ ಮೂಲಕ ತೆರಳಿ ಅವರು ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆ 2024 ಯದುವೀರ್‌ ಆಸ್ತಿಯ ಕುರಿತ ಅಫಿಡವಿಟ್‌ ಅನ್ನೂ ಚುನಾವಣಾ ಆಯೋಗಕ್ಕೆ ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ. ಅವರು ಮೈಸೂರಿನ ರಾಜಮನೆತನಕ್ಕೆ ಸೇರಿದರೂ ಕೂಡ 4,99,59,303 ರೂಪಾಯಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ.
ಯದುವೀರ್‌ ಅವರ ಪತ್ನಿ ತ್ರಿಶಿಕಾ ಕುಮಾರಿ ದೇವಿ ಅವರು 1,04,25,000 ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಇವರ ಪುತ್ರನ ಹೆಸರಿನಲ್ಲಿ 3.63 ಕೋಟಿ ರೂಪಾಯಿ ಆಸ್ತಿ ಇದೆ. ಇನ್ನು ಅವರ ಕುಟುಂಬದಲ್ಲಿ ಯಾರೂ ಸಾಲ ಹೊಂದಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬಳಿ 1 ಲಕ್ಷ ರೂಪಾಯಿ ನಗದು ಇದ್ದರೆ, ಪತ್ನಿ ಬಳಿ 75,000 ರೂಪಾಯಿ ಇದೆ. ಆದರೆ ಯದುವೀರ್‌ ಅವರ ಹೆಸರಿನಲ್ಲಿ ಬೈಕ್‌, ಕಾರು ಸೇರಿ ಯಾವುದೇ ವಾಹನ ಇಲ್ಲ. ಬಿಜೆಪಿ ಅಭ್ಯರ್ಥಿಯು 28.42 ಲಕ್ಷ ರೂಪಾಯಿ ಆದಾಯದ ಕುರಿತು ಉಲ್ಲೇಖಿಸಿದ್ದಾರೆ. ಇನ್ನು ವಿಶೇಷ ಎಂದರೆ ಯದುವೀರ್‌ ಅವರು ಯಾವುದೇ ರೀತಿಯ ಸ್ಥಿರಾಸ್ತಿ ಹೊಂದಿಲ್ಲ. ಇವರು ಆದಾಯ ತೆರಿಗೆಯನ್ನೂ ಕೂಡ ಬಾಕಿ ಉಳಿಸಿಕೊಂಡಿಲ್ಲ.
* ಗಮನಾರ್ಹ ಸಂಗತಿಯೆಂದರೆ ಯದುವೀರ್‌ ರಾಜನಾಗಿದ್ದರೂ ಕೂಡ ಅವರ ಹೆಸರಿನಲ್ಲಿ ಒಂದೇ ಒಂದು ಬೈಕ್‌, ಕಾರು, ಸೇರಿದಂತೆ ಯಾವುದೇ ವಾಹವನ್ನು ಹೊಂದಿಲ್ಲದಿರುವುದು..
Sanjay S Baraki ...🖋

8
1389 views