logo

ಸಡಗರದಿಂದ ಜರುಗಿದ ಜೋಡು ರಥೋತ್ಸವ

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಶ್ರೀ ಅಡವಿ ಸ್ವಾಮಿ,ಶ್ರೀ ಹಾಲಬಸ್ವೇಶ್ವರ ಸ್ವಾಮಿಯ ಜೋಡುರಥೋತ್ಸವವು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಇದೆ ವೇಳೆ ಗ್ರಾಮದ ಹಿರಿಯರು ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾದ ದೊಡ್ಡ ಕೇಶವ ರೆಡ್ಡಿ ಅವರು ಮಾತನಾಡಿ ಶ್ರೀ ಅಡಿವಿ ಸ್ವಾಮಿಯ ಹಾಗೂ ಶ್ರೀ ಆಲಬಸವೇಶ್ವರ ಸ್ವಾಮಿಯ ರಥೋತ್ಸವದ ಹಾರ್ದಿಕ ಶುಭಾಶಯಗಳು ನಾಡಿನ ಜನತೆಗೆ ಮಳೆ,ಬೆಳೆ,ಸುಖ,ಶಾಂತಿ,ನೆಮ್ಮದಿ,ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.
ತಮ್ಮ ನಿವಾಸದಿಂದ ಜೋಡು ರಥಕ್ಕೆ ಬೃಹತ್ಕಾರದ ಹೂವಿನ ಮಾಲೆಯನ್ನು ದೇವರಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಸರ್ವ ಸಕಲ ಭಕ್ತಾದಿಗಳು ಊರಿನ ಮುಖಂಡರು ಜಾತ್ರೆಯಲ್ಲಿ ಸುಮಾರು ಹೂವಿನ ಮಾಲೆಗಳು ಪಟಾಕಿ ಸಿಡಿಸುವುದರ ಮೂಲಕ ಅದ್ದೂರಿಯಾಗಿ ಜರುಗಿತು

7
14587 views