logo

ಗೋವುಗಳಿಗೆ ಬಾಳೆಹಣ್ಣು ನೀಡಿ ಶಿವರಾತ್ರಿ ಆಚರಿಸಿದ ಸೋಮಶೇಖರ

ಶಿವರಾತ್ರಿ ಎಂದರೇ ಉಪವಾಸ, ದೇವಸ್ಥಾನ ದರ್ಶನ, ಜಾಗರಣೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಅಣಿಯಾಗುವುದು ಸಾಮಾನ್ಯ. ಆದರೇ ಇದೆಲ್ಲದಕ್ಕೂ ವಿಭಿನ್ನವಾಗಿ ಶುಕ್ರವಾರ ದಿನಾಂಕ 8-3-2024 ಮಧ್ಯಾಹ್ನ 3 ಗಂಟೆ ಸುಮಾರಿಗೆ ರಬಕವಿ ನಗರದಲ್ಲಿರುವ ಗೋವುಗಳಿಗೆ ಬಾಳೆಹಣ್ಣನ್ನು ತಿನ್ನಿಸುವುದರ ಮೂಲಕ ನಿಜವಾದ ಶಿವರಾತ್ರಿಯನ್ನು ಸ್ಥಳೀಯ ಸೋಮಶೇಖರ ಕುಳ್ಳೊಳ್ಳಿ ಅವರು ಶಿವರಾತ್ರಿಯನ್ನು ಆಚರಿಸಿದ್ದಾರೆ. ಭಾರತೀಯ ಸಂಪ್ರದಾಯದಲ್ಲಿ ಕಾಮಧೇನುವಿಗೆ ಬಹಳಷ್ಟು ಉನ್ನತ ಸ್ಥಾನವಿದೆ. ಅಂತಹ ಪ್ರತಿರೂಪವೇ ಭೂಮಿಯ ಮೇಲಿನ ಆಕಳು ಎಂದು ನಂಬಲಾಗುತ್ತದೆ. ಅಂತಹ ಪ್ರಾಧಾನ್ಯವುಳ್ಳ ಆಕಳಿಗೆ ತಮ್ಮ ಮನಸ್ಸಿನ ತೃಪ್ತಿಗಾಗಿ ಯಾವುದೇ ಪ್ರಚಾರ ಬಯಸದೇ ಅವರು ನಡೆಸುತ್ತಿರುವ ಸೇವೆಯು ಆಪ್ ನ ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಮುಖತಿರುಗಿಸಿ, ಬೇಡಾರಿ ಸರ್, ಇದು ನಮ್ಮ ಮನಸ್ಸಿನ ತೃಪ್ತಿಗಾಗಿ ಮಾಡುತ್ತಿರುವ ಸೇವೆ ಎಂದು ನಯವಾಗಿಯೇ ಹೇಳಿದರು. ಅಂತಹ ಅಪರೂಪದ ಶಿವನ ಸೇವೆಯಿಂದ ಗೋವುಗಳು ಸೇರಿದಂತೆ ಪ್ರಾಣಿಪಕ್ಷಿಗಳ ಮೇಲಿನ ಸೇವೆಯು ಆಧ್ಯಾತ್ಮಿಕ ಹೆಸರಿನಲ್ಲಿ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತದೆ ಎಂದು ಪರಿಸರಪ್ರೇಮಿಗಳ ಅಭಿಪ್ರಾಯವಾಗಿದೆ.

8
665 views