logo

ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ- ಶಾಲಿವಾನ ಉದಗಿರೆ

ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ- ಶಾಲಿವಾನ ಉದಗಿರೆ

21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ ಹಾಗೂ ಬಿತ್ತಿ ಪತ್ರ ಬಿಡುಗಡೆ

ತಾಲೂಕು ಕಸಾಪ ಔರಾದ ಘಟಕದ ವತಿಯಿಂದ

ಔರಾದ : ಇದೇ ತಿಂಗಳು 09 ಮತ್ತು 10 ರಂದು ಜರುಗಲಿರುವ ೨೧ನೆಯ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ತಾಲೂಕಿನ ಸಾಹಿತಿಗಳು, ಕಲಾವಿದರು, ಕನ್ನಡಪರ ಹೋರಾಟಗಾರರು, ಚಿಂತಕರು,ಕನ್ನಡಾಭಿಮಾನಿಗಳು ಭಾಗವಹಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಅಧ್ಯಕ್ಷ ಡಾ.ಶಾಲಿವಾನ ಉದಗಿರೆ ವಿನಂತಿಸಿದರು.

ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ನಾಡೋಜ ಡಾ. ಬಸವಲಿಂಗ ಪಟ್ಟದ್ದೆವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಲ್ಲರೂ ಭಾಗವಹಿಸಲು ತಿಳಿಸಿದರು.

ಜಿಲ್ಲಾ ಕಸಾಪ ಗಡಿನಾಡು ಪ್ರತಿನಿಧಿ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ಕನ್ನಡಕ್ಕೆ ಹಲವು ರೀತಿಯಲ್ಲಿ ಅಪಾರ ಕಾಣಿಕೆ ನೀಡಿರುವ ಪೂಜ್ಯರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲಿದ್ದು, ಗಡಿ ಕನ್ನಡಿಗರ ಪಾಲ್ಗೊಳ್ಳುವಿಕೆ ಕನ್ನಡ ಪ್ರೀತಿಗೆ ಸಾಕ್ಷಿಯಾಗಬೇಕು ಎಂದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಜಗನ್ನಾಥ ಮೂಲಗೆ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಭಾಗವಹಿಸಿ ನುಡಿ ಜಾತ್ರೆಯ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು,

ಇದೇ ಸಂದರ್ಭದಲ್ಲಿ ಪ್ರಚಾರ ರಥಕ್ಕೆ ಬಸವ ಗುರುಕುಲ ಶಾಲೆಯಲ್ಲಿ ಚಾಲನೆ ನೀಡಲಾಯಿತು
ಬಸವ ಬಳಗದ ಅಧ್ಯಕ್ಷ ಡಾ ಧನರಾಜ ರಾಗಾ,ಅಮೃತರಾವ ಬಿರಾದಾರ, ಜಗನ್ನಾಥ ದೇಶಮುಖ, ಬಿ.ಎಂ ಅಮರವಾಡಿ, ಮಲ್ಲಿಕಾರ್ಜುನ ಟಂಕಸಾಲೆ, ಅಂಬಾದಾಸ ನೆಳಗೆ, ಚಂದ್ರಕಾಂತ ಘುಳೆ, ಮಲ್ಲಪ್ಪ ಗೌಡಾ, ಧನರಾಜ ನಿಟ್ಟೂರೆ, ಸಂತೋಷ ಚಂಡೇಶ್ವರೆ, ಸತೀಶ ಗಂದಿಗುಡೆ, ಇಂದುಮತಿ ಎಡವೆ , ನಾಗನಾಥ ಪಾಟೀಲ, ಶರಣಪ್ಪ ನವಬಾದೆ, ರಜನಿಕಾಂತ ಮಲಗೆ, ಸಂಗ್ರಾಮ ಪವಾರ, ಸೂರ್ಯಕಾಂತ ಬಿರಾದರ, ಶಿವರಾಜ ಶಟಕಾರ, ನಾಗನಾಥ ಶಂಕು, ಸಂಜುಕುಮಾರ ವಲ್ಲಾಂಡೆ ಬಸವ ಗುರುಕುಲ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರಿದ್ದರು ಪಾಲ್ಗೊಂಡಿದ್ದರು.

3
2066 views