logo

ಬೆಸ್ಕಾಂ ಗ್ರಾಹಕರ ಸಂವಾದ ಸಭೆ ; ಹೊಳೆಸಿರಿಗೆರೆ ದೇವಸ್ಥಾನಕ್ಕೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ


ಹರಿಹರ : ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ಶ್ರೀ ಹೊನ್ನಮ್ಮ ದೇವಿ ದೇವಸ್ಥಾನಕ್ಕೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆ.ವಿ.ಕಂ ಹರಿಹರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ ನಾಯ್ಕ್ ಭರವಸೆ ನೀಡಿದರು.
ನಗರದ ಬೆ.ವಿ.ಕಂ ಉಪ ವಿಭಾಗದ ಕಚೇರಿಯಲ್ಲಿ ಶನಿವಾರ ನಡೆದ ಗ್ರಾಹಕರ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ದೇವರ ಬೆಳಕೆರೆ ಗ್ರಾಮದ ಶ್ರೀ ಹೊನ್ನಮ್ಮ ದೇವಿ ದೇವಸ್ಥಾನ ಟ್ರಸ್ಟ್ ನವರು ಸಭೆಯಲ್ಲಿ ತಮ್ಮ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕಕ್ಕೆ ಮನವಿ ಮಾಡಿದ್ದಾರೆ.
ಸಂಬಂಧಪಟ್ಟ ಅಲ್ಲಿನ ಅಧಿಕಾರಿಗೆ ಹೊಸದಾಗಿ ಎಸ್ಟಿಮೇಟ್ (ಅಂದಾಜು ಪಟ್ಟಿ) ತಯಾರಿಸುವಂತೆ ಸ್ಥಳದಲ್ಲಿ ಸೂಚನೆ ನೀಡಿ ದರು.ನನ್ನ ವ್ಯಾಪ್ತಿಗೆ 1.5 ಲಕ್ಷ ರೂಗಳ ವರೆಗೆ ಮಂಜೂರಾತಿ ನೀಡಲು ಅವಕಾಶವಿದೆ ಆದ್ದರಿಂದ ಅಂದಾಜು ಪಟ್ಟಿ ಅದರೊಳಗೆ ಇದ್ದರೆ ಕೂಡಲೇ ಸಂಪರ್ಕಕ್ಕೆ ವ್ಯವಸ್ಥೆ ಮಾಡುತ್ತೇನೆ ಎಂದು ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಕೊಂಡಜ್ಜಿ ಗ್ರಾಮದ ರಾಮಪ್ಪ ಮತ್ತು ಕೆಲವು ನಾಗರಿಕರು ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕಾಗಿ ಮನವಿಯೊo ದನ್ನು ಅರ್ಪಿಸಿ ಸ್ಥಳದಲ್ಲಿಯೇ ಅನುಮತಿ ಪಡೆದರು.
ಈ ಸಮಯದಲ್ಲಿ ಮಳೆ ಸಿರಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ, ಶ್ರೀ ಹೊನ್ನಮ್ಮ ದೇವಿ ದೇವಸ್ಥಾನ ಟ್ರಸ್ಟ್ ನ ಡಾ.ವಸಂತಪ್ಪ ಐಗೂರ್, ಹನುಮಂತಪ್ಪ, ಮರಿಸಿದ್ದಪ್ಪಳವರ, ಗುತ್ತಿಗೆದಾರ ಖಲೀಮುಲ್ಲಾ ಖಾನ್, ಸಹಾಯಕ ಇಂಜಿನಿಯರ್ ಎ. ಮನೋಜ್, ಮಾರ್ಕಂಡೇಯ, ಕಿರಿಯ ಇಂಜಿನಿಯರ್ ಪ್ರಭು, ಸಿಬ್ಬಂದಿಗಳಾದ ನಾಗರಾಜ್, ಕೃತಿಕಾ,ರಮೇಶ್ ಮುಂತಾದವರು ಉಪಸ್ಥಿತರಿದ್ದರು.

6
2002 views