logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬಿದ್ರಿ ವೃತ್ತಕ್ಕೆ ಹೊಸ ಮೆರುಗು ನೀಡಿದ ರೋಟರಿ ಸಿಲ್ವರ್ ಸ್ಟಾರ್

ಬೀದರ್: ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ಬಿದ್ರಿ ಕಲೆಯ ಸ್ಮರಣಾರ್ಥ ನಗರದ ಹೈದರಾಬಾದ್ ರಸ್ತೆಯಲ್ಲಿರುವ ಬಿದ್ರಿ ವೃತ್ತಕ್ಕೆ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಹೊಸ ಮೆರುಗು ನೀಡಲಾಗಿದೆ.

ರೋಟರಿ ಸಿಲ್ವರ್ ಕೈಗೊಂಡಿದ್ದ ಸೌಂದರ್ಯೀಕರಣ ಕಾಮಗಾರಿಯನ್ನು ರೋಟರಿ ಡಿಸ್ಟ್ರಿಕ್ಟ್ 3160ರ ಗವರ್ನರ್ ಎಂ.ಕೆ. ರವೀಂದ್ರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯವಾಗಿದೆ. ಬಿದ್ರಿ ವೃತ್ತಕ್ಕೆ ಆಧುನಿಕ ವಿನ್ಯಾಸ ಹಾಗೂ ಹಸಿರು ಪರಿಸರದ ಸ್ಪರ್ಶ ನೀಡಿರುವುದು ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.


ರೋಟರಿ 3160ರ ಭಾವಿ ಗವರ್ನರ್ ತ್ರಿವಿಕ್ರಮ್ ಜೋಶಿ ಮಾತನಾಡಿ, ಇಂತಹ ಸೌಂದರ್ಯೀಕರಣ ಯೋಜನೆಗಳು ನಾಗರಿಕರಲ್ಲಿ ಪರಿಸರ ಹಾಗೂ ನಗರಾಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಸಮಾಜಕ್ಕೆ ಮಾದರಿಯಾಗಲಿವೆ ಎಂದು ತಿಳಿಸಿದರು.

ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದೇ ಉದ್ದೇಶದಿಂದ ಬಿದ್ರಿ ವೃತ್ತದ ಸೌಂದರ್ಯೀಕರಣ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ IFCR ಮಾಜಿ ಅಧ್ಯಕ್ಷ ಕೆ.ಆರ್.ಪಿ ಸಾರಥಿ, IFRC ದಕ್ಷಿಣ ವಲಯದ ಅಧ್ಯಕ್ಷ ಕೇಶವ್ ಶ್ರೀನಿವಾಸ್ ಗೌಡ, ರೋಟರಿ ಕಲ್ಯಾಣ ವಲಯದ ಅಸಿಸ್ಟೆಂಟ್ ಗವರ್ನರ್ ಹಾವಶೆಟ್ಟಿ ಪಾಟೀಲ್, ನಿತಿನ್ ಕರ್ಪೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಘು ಕೃಷ್ಣಮೂರ್ತಿ, ರೋಟರಿ ಸಿಲ್ವರ್ ಸ್ಟಾರ್ ಉಪಾಧ್ಯಕ್ಷ ಆನಂದ ಕೋಟಾರ್ಕಿ, ಕಾರ್ಯದರ್ಶಿ ಕಿರಣ್ ಸ್ಯಾಮ್ಯುಯೆಲ್, ಪ್ರಾಜೆಕ್ಟ್ ಡೈರೆಕ್ಟರ್, ಖಜಾಂಚಿ ನಿಹಾಲ್ ಸಿಂಗ್, ಜಾಯಿಂಟ್ ಸೆಕ್ರೆಟರಿ ಭಾವೇಶ ಪಟೇಲ್ ಹಾಗೂ ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

4
691 views

Comment