ಬರಗೂರು: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಬರಗೂರು: ೦೫-೦೬-೨೦೨೬ರಂದು ಸಿರಾ ತಾಲ್ಲೂಕಿನ ಬರಗೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಏಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಮಂಜುನಾಥ್, ಮುಖ್ಯ ಶಿಕ್ಷಕರಾದ ಶ್ರೀಮತಿ ಮಾಲತಿ, ಸಹಶಿಕ್ಷಕರುಗಳು, ಹಿರಿಯ ಮಾಧ್ಯಮಿಕ ಶಾಲಾ ವಿಭಾಗದ ಏಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಬಸವರಾಜು ಬಿ ಸಿ, ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಚೈತ್ರ, ಸಹಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಸೇರಿ ಸಸಿ ನೆಟ್ಟು, ನೀರೆರೆದು ಸಂಭ್ರಮಿಸಿದರು.
ವಿದ್ಯಾರ್ಥಿಗಳಿಗಾಗಿ ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು ಏರ್ಪಡಿಸಲ್ಪಟ್ಟವು. ಮುಖ್ಯ ಶಿಕ್ಷಕರಾದ ಶ್ರೀಮತಿ ಮಾಲತಿ ಅವರು ಮಾತನಾಡಿ, ಪರಿಸರದಿಂದ ಪ್ರೇರಿತರಾಗೋಣ ಮತ್ತು ಪರಿಸರ ಸಂರಕ್ಷಣೆಯೇ ನಮ್ಮ ಭವಿಷ್ಯ ಎಂದರು. ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿ ಸಂಭ್ರಮಿಸಿದರು.