logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಹುಲ್ ಸೂಚನೆಗೆ ಶರತ್ತು ಮುಂದಿಟ್ಟು ಸಿದ್ದರಾಮಯ್ಯ ರಾಜೀನಾಮೆಗೆ ಒಪ್ಪಿಗೆ

ನಿನ್ನೆ ಅಂತ್ಯಗೊಂಡ ಕಾಂಗ್ರೆಸ್ ಹೈ ವೋಲ್ಟೇಜ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಕೆಲವು ಷರತ್ತುಗಳ ಮೇಲೆ ರಾಜೀನಾಮೆಗೆ ಓಕೆ ಅಂದಿದ್ದಾರೆ. ಡಿಕೆಶಿ ಸಂಪುಟದಲ್ಲಿ ದಲಿತ ಲಿಂಗಾಯತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ನಾಲ್ಕು ವರ್ಗಗಳ ಡಿಸಿಎಂ ಸ್ಥಾನ ಮತ್ತು ತಾವು ಸೂಚಿಸಿದ 20 ಕ್ಕೂ ಅಧಿಕ ಜನರಿಗೆ ಮಂತ್ರಿ ಸ್ಥಾನ ನೀಡುವುದು. ನಾಳೆ ಬೆಳಿಗ್ಗೆ 10:30ಕ್ಕೆ ರಾಜ್ಯಪಾಲರಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ.

ಶುಕ್ರವಾರ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಕೆಶಿಯನ್ನು ನಾಯಕನನ್ನಾಗಿ ಆಯ್ಕೆಗೊಳಿಸಲಾಗುವುದು. ಒಂದು ವಾರದಲ್ಲಿ ಡಿಕೆಶಿ ಮುಖ್ಯಮಂತ್ರಿ ಸ್ಥಾನ ಗ್ರಹಣ ಮಾಡುವ ಎಲ್ಲ ಸಾಧ್ಯತೆಗಳಿವೆ. ಮುಂದಿನ ರಾಜಕೀಯ ಬೆಳವಣಿಗೆ ಸುರ್ಜೆವಾಲಾ ನೇತೃತ್ವದಲ್ಲಿ ಜರುಗಲಿದೆ.

ಸಂಭಾವ್ಯ ಉಪಮುಖ್ಯಮಂತ್ರಿ ಸ್ಥಾನಗಳಿಗೆ ಯತೀಂದ್ರ ಸಿದ್ದರಾಮಯ್ಯ ,ಎಂಬಿ ಪಾಟೀಲ್ ,ಪ್ರಿಯಾಂಕ ಖರ್ಗೆ ಮತ್ತು ಜಮೀರ್ ಅಹಮದ್ ರವರ ಹೆಸರು ಮುಂಚೂಣಿಯಲ್ಲಿದೆ. ಗೃಹ ಸಚಿವ ಜಿ ಪರಮೇಶ್ವರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದು ಈಗಾಗಲೇ 20 ಸಚಿವರ ಸಹಿಗಳನ್ನು ಕಲೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಪಕ್ಷದ ನಿಷ್ಠಾವಂತ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿಯುತ್ತಿದ್ದು ಅವರ ಪ್ರಾಮಾಣಿಕತೆಗೆ ಸಾಕ್ಷಿ ಎನ್ನಲಾಗಿದೆ. ಡಿಕೆಶಿ ಮುಖ್ಯಮಂತ್ರಿ ಯಾಗುವ ಸುದ್ದಿ ಹೊರ ಬೀಳುತ್ತಲೇ ರಾಮನಗರ ಮತ್ತು ಇತರ ಸ್ಥಳಗಳಲ್ಲಿ ಡಿಕೆಶಿ ಅಭಿಮಾನಿಗಳು ಹಾಗೂ ಅವರ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಹರಿಸಿ ವಿಜಯೋತ್ಸವ ಆಚರಿಸಿದ್ದಾರೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯನವರ ಮೂರು ವರ್ಷಗಳ ರಾಜ್ಯಭಾರ ನಾಳೆ ಅವರ ರಾಜೀನಾಮೆ ಮುಖಾಂತರ ಕೊನೆಗೊಳ್ಳಲಿದೆ.

20
682 views

Comment