ಬೀದರ್: ಮೆಡಿಸಿನ್ ಆನ್‌ಲೈನ್ ಮಾರಾಟಕ್ಕೆ ಮೆಡಿಕಲ್ ಶಾಪ್‌ಗಳ ಪ್ರತಿಭಟನೆ
ಬೀದರ್: ದೇಶಾದ್ಯಾಂತ ಮೆಡಿಕಲ್ ಶಾಪ್‌ಗಳು ಆನ್‌ಲೈನ್‌ನಲ್ಲಿ ಮೆಡಿಸಿನ್ ಮಾರಾಟಕ್ಕೆ ವಿರೋಧವಾಗಿ ಬಂದ್ ಆಗಿವೆ. ಬೀದರ್ ಜಿಲ್ಲೆಯಲ್ಲಿ ಸಹ ಮೆಡಿಕಲ್ ಅಂಗಡಿಗಳು ಬಂದ್ ಆಗಿದ್ದು, ಬ್ರಿಮ್ಸ್ ಆಸ್ಪತ್ರೆಗೆ ಹತ್ತಿರ ಇರುವ ಪ್ರಭು ಮೆಡಿಕಲ್ & ಜನರಲ್ ಸ್ಟೋರ್ ಸಹ ಬಂದ್ ಆಗಿದ್ದನ್ನು ಮಾಲೀಕರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸುಮಾರು 1500 ಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಇದ್ದು, ಇಂದಿನ ಬಂದ್ ಕಾರಣದಿಂದಾಗಿ ಎಮರ್ಜೆನ್ಸಿ ಸೇರಿದಂತೆ ಎಲ್ಲಾ ರೀತಿಯ ಮೆಡಿಸಿನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಪ್ರತಿಭಟನೆ ಆನ್‌ಲೈನ್ ಮಾರಾಟದ ವಿರುದ್ಧ ನಡೆದಿದೆ.