logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರ: ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಹಾಗೂ ವಿದ್ಯಾರ್ಥಿ ಸನ್ಮಾನ

ಬೀದರ: ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದನಿಲಯದಲ್ಲಿ 11/05/2026 ರಂದು ಸಂಜೆ 6:30 ಗಂಟೆಗೆ 185ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ, ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಹಾಗೂ ಡಾ. ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜರುಗಿತು.

ಪರಮ ಪೂಜ್ಯ ನಾಡೋಜ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮಕ್ಕಳಿಗೆ ಪ್ರೀತಿ, ಗೌರವ ಮತ್ತು ಉತ್ತಮ ಸಂಸ್ಕೃತಿ ಬೆಳೆಸುವಂತೆ ಕರೆ ನೀಡಿದರು. ಅಕ್ಕಮಹಾದೇವಿ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಲೀಲಾವತಿ ಚಾಕೊತೆ ಅವರು ಬಸವ ಗುರುವಿನ ಪೂಜೆ ಸಲ್ಲಿಸಿ, ಬಸವಣ್ಣನವರ ತತ್ವಗಳ ಮಹತ್ವವನ್ನು ವಿವರಿಸಿದರು. ಹೀರೆಮಠ ಸಂಸ್ಥಾನದ ಪೀಠಾಧಿಪತಿಯಾಗಿರುವ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಕರ್ನಾಟಕ ಸಾಹಿತ್ಯ ಸಂಘ ಬೀದರ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಅವರು ಡಾ. ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸೇವೆಗಳ ಕುರಿತು ಮಾತನಾಡಿ, ಅವರ ಗುರುಕುಲ ಸ್ಥಾಪನೆ ಮತ್ತು ಸಮಾನತೆಗಾಗಿ ಮಾಡಿದ ಕಾರ್ಯಗಳನ್ನು ವಿವರಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿಗಳು ವಚನ ಚಿಂತನೆ ಬಗ್ಗೆ ಮಾತನಾಡಿದರು. ಡಾ. ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗೌರವ ಸನ್ಮಾನ ಮಾಡಲಾಯಿತು. ವಿವಿಧ ಶರಣರು, ಶಿಕ್ಷಕರು, ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0
0 views

Comment