logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಫಜಲಪೂರ: ಮಾಲಿಕಯ್ಯ ವಿ. ಗುತ್ತೇದಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಅಫಜಲಪೂರ: ಮಾಜಿ ಶಾಸಕರು ಮತ್ತು ಸಚಿವರಾದ ಮಾಲಿಕಯ್ಯ ವಿ. ಗುತ್ತೇದಾರ್ ಅವರ ಜನ್ಮದಿನದ ಅಂಗವಾಗಿ ಅಫಜಲಪೂರ ತಾಲೂಕಿನ ಜನಪ್ರಿಯ ನಾಯಕರು, ಅಭಿಮಾನಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಮಾಲಿಕಯ್ಯ ವಿ. ಗುತ್ತೇದಾರ್ ಅವರು ಸರಳತೆ, ಜನಪರ ಕಾಳಜಿ ಮತ್ತು ಅಭಿವೃದ್ಧಿ ಚಿಂತನೆಗಳಿಂದ ಜನಮನ ಗೆದ್ದು, ಅನೇಕ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಅವರು ಅಫಜಲಪೂರ ಜಿಲ್ಲೆಯ ಶಿಕ್ಷಣ, ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟರು. ಸಂಗಾಪುರ ಗ್ರಾಮದ ಯುವ ಮುಖಂಡ ಮೌಲಾಲಿ ಎಂ. ಜಮಾದಾರ್ ಅವರು ಮಾಜಿ ಸಚಿವರಿಗೆ ಶುಭಾಶಯ ತಿಳಿಸಿ, ಅವರು ಇನ್ನೂ ಹೆಚ್ಚಿನ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.

ತಾಲೂಕಿನ ಜನತೆ ಮಾಲಿಕಯ್ಯ ವಿ. ಗುತ್ತೇದಾರ್ ಅವರಿಗೆ ಆರೋಗ್ಯ, ಆಯುಷ್ಯ ಮತ್ತು ಯಶಸ್ಸು ಹೆಚ್ಚಾಗಲಿ ಎಂದು ಶುಭ ಕೋರಿದ್ದಾರೆ.

16
7211 views

Comment