ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೆ ಆರ್ ಎಸ್ ಕಾರ್ಯಕರ್ತರು ಮತ್ತು ಉಪನೊಂದಣಾಧಿಕಾರಿಯ ನಡುವೆ ವಾದ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಕಚೇರಿಯ ಉಪನೊಂದಣಾಧಿಕಾರಿಗಳೊಂದಿಗೆ ವಿವಾದಕ್ಕೆ ಇಳಿದಿದ್ದಾರೆ. ಉಪನೊಂದಣಾಧಿಕಾರಿಗಳು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪಕ್ಕೆ ತಿರುಗೇಟು ನೀಡಿದ ಉಪನೊಂದಣಾಧಿಕಾರಿ, ಕಾರ್ಯಕರ್ತರಿಗೆ ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾಡಿಕೊಂಡು ಹೋಗಿರಿ, ವಿನಾಕಾರಣ ಕೆಲಸದಲ್ಲಿ ಅಡ್ಡಿಪಡಿಸಬೇಡಿ ಎಂದಿದ್ದಾರೆ ಎಂದು ತಿಳಿಸಲಾಗಿದೆ.