ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಸ್ ದೇಶಮುಖ್ ಹೃದಯಾಘಾತದಿಂದ ನಿಧನ
ಕಲಬುರಗಿ : ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಸ್ ದೇಶಮುಖ್ ಅವರು 8-5-2026 ರಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರ ಮತ್ತು ಸಂಬಂಧಿತ ವಲಯದಲ್ಲಿ ಶೋಕ ಪರಿಸ್ಥಿತಿ ಉಂಟಾಗಿದೆ.ಅವರ ಅಂತ್ಯಕ್ರಿಯೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಮುಚ್ಚಳಂಬ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಅವರ ಅಕಾಲಿಕ ನಿಧನಕ್ಕೆ ಕಿರಣ್ ಪಾಟೀಲ್, ಸಂಗಮನಾಥ್ ರೇವತ್ ಗಾಂವ್ ಡಾಕ್ಟರ್ ಪ್ರಲ್ಹಾದ್ ಬುರ್ಲಿ, ಶೇಖರ್ ಬ್ಯಾಕೋಡ್ ಮತ್ತು ದತ್ತು ಉದಯಕರ್ ಶೋಕ ವ್ಯಕ್ತಪಡಿಸಿದ್ದಾರೆ.