ಬೆಳಗಾವಿಯಲ್ಲಿ ಕೆಸಿ ಗ್ಲೋಬ್ಡ್ ಕೇಂದ್ರ ಉದ್ಘಾಟನೆ
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾಗತಿಕ ಶಿಕ್ಷಣಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕೆಸಿ ಗ್ಲೋಬ್ಡ್ ಕೇಂದ್ರವು ಬೆಳಗಾವಿಯಲ್ಲಿ ಉದ್ಘಾಟನೆಯಾಯಿತು. ಮುಖ್ಯ ಅತಿಥಿಯಾಗಿ ಡಾ. ಪ್ರಭಾಕರ ಕೋರೆ ದೀಪ ಬೆಳಗಿಸಿ ಕೇಂದ್ರವನ್ನು ಉದ್ಘಾಟಿಸಿದರು. ಅವರು ಜಾಗತಿಕ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಂದಿನ ಯುವಕರಿಗೆ ಅತ್ಯಂತ ಅಗತ್ಯವೆಂದು ತಿಳಿಸಿದ್ದಾರೆ.
ಸಂಸ್ಥಾಪಕ ಮತ್ತು ಸಿಇಒ ಕಮಲ್ ಚಾಬ್ರಾ ಮತ್ತು ಪ್ರೊ. ಡಾ. ಮನ್ಪ್ರೀತ್ ಸಿಂಗ್ ಅವರು ಈ ಕೇಂದ್ರದಲ್ಲಿ ಯುಎಸ್ ಸಿಪಿಎ, ಸಿಎಂಎ ಸೇರಿದಂತೆ ಅಂತರಾಷ್ಟ್ರೀಯ ಕೋರ್ಸ್‌ಗಳ ತರಬೇತಿ ನೀಡಲಾಗುವುದಾಗಿ ತಿಳಿಸಿದ್ದಾರೆ. ಭಾಗ್ಯನಗರದ ಹರಿಕುಂಜ ಪ್ರದೇಶದಲ್ಲಿ ಆರಂಭವಾದ ಈ ಕೇಂದ್ರವು ವಿದ್ಯಾರ್ಥಿಗಳಿಗೆ ಆಧುನಿಕ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನವನ್ನು ಒದಗಿಸುವುದು ನಿರೀಕ್ಷಿಸಲಾಗಿದೆ.