logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬಿರುಗಾಳಿ ಸಹಿತ ಮಳೆಗೆ ಸೋಲಾರ್ ಕಂಪನಿಗೆ ಭಾರೀ ನಷ್ಟ

ಗುರುಮಿಟ್ಕಲ್ : ಸ್ಥಳೀಯವಾಗಿ ಬೀಸಿದ ಭೀಕರ ಬಿರುಗಾಳಿ ಹಾಗೂ ಅತಿ ವೇಗವಾಗಿ ಸುರಿದ ಮಳೆಗೆ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಇನ್ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ತತ್ತರಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಹಾನಿಗೀಡಾಗಿವೆ.
ಕಳೆದ ದಿನಾಂಕ 27ರ ಸಾಯಂಕಾಲ ಅನಿರೀಕ್ಷಿತವಾಗಿ ಸಂಭವಿಸಿದ ಈ ನೈಸರ್ಗಿಕ ವಿಕೋಪದಿಂದಾಗಿ ಕಂಪನಿಯ ಆವರಣದಲ್ಲಿದ್ದ ಸುಮಾರು 300ಕ್ಕೂ ಹೆಚ್ಚು ಸೋಲಾರ್ ಪ್ಲೇಟ್‌ಗಳು ಬಿರುಗಾಳಿಯ ರಭಸಕ್ಕೆ ಕಿತ್ತುಕೊಂಡು ಹೋಗಿವೆ. ಇದರೊಂದಿಗೆ ಅಳವಡಿಸಲಾಗಿದ್ದ 200ಕ್ಕೂ ಅಧಿಕ ಸಿವಿಲ್ ಸ್ಟ್ರಕ್ಚರ್‌ಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, ಕಂಪನಿಯ ಆವರಣದಲ್ಲಿ ಶೇಖರಿಸಿಡಲಾಗಿದ್ದ ಇತರ ಬೆಲೆಬಾಳುವ ಸಾಮಗ್ರಿಗಳು ಗಾಳಿಗೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಈ ಘಟನೆಯಿಂದಾಗಿ ಕಂಪನಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದ್ದು, ಗಾಳಿಯ ವೇಗಕ್ಕೆ ಸೋಲಾರ್ ಉಪಕರಣಗಳು ಕೊಚ್ಚಿಕೊಂಡು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

15
899 views

Comment