ಬೆಳಗಾoವಿ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ 107ನೇ ಶಿವಜಯಂತಿಯನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಗುವುದು
ಬೆಳಗಾoವಿ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ 107ನೇ ಶಿವಜಯಂತಿಯನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಗುತಿದೆ . ನಗರದೆಲ್ಲೆಡೆ ಶಿವಭಕ್ತರು ಜಾಥಾ, ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗೌರವ ಸಲ್ಲಿಸಿದರು.
ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ವಿವಿಧ ಸಂಘಟನೆಗಳು ಹಾಗೂ ಯುವಕರ ಬಳಗಗಳು, ಭವ್ಯ ನಗರದ ಪ್ರಮುಖ ಬೀದಿಗಳಲ್ಲಿ ಆಚರಿಸಿದರು . ಮಹಿಳೆಯರು, ಯುವಕರು ಮತ್ತು ಮಕ್ಕಳು ಪರಂಪರೆಯ ವೇಷಭೂಷಣ ಧರಿಸಿ
ಕೇಸರಿ ಧ್ವಜಗಳು ಹಾರಾಡುತ್ತಿದ್ದು, ಶಿವಾಜಿ ಮಹಾರಾಜರ ಜಯಘೋಷಗಳು ಮೊಳಗಿದವು. ಹಲವು ಸಾಮಾಜಿಕ ಸಂಘಟನೆಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಾಲಿಕೆ ಪ್ರತಿನಿಧಿಗಳು ಹಾಗೂ ಗಣ್ಯರು ಶಿವಾಜಿ ಮಹಾರಾಜರ ಜೀವನ ಹಾಗೂ ಅವರ ಆಡಳಿತ ಧೋರಣೆ ಕುರಿತು ಮಾತನಾಡಿ, ಯುವಜನತೆಗೆ ಪ್ರೇರಣೆಯ ಸಂದೇಶ ನೀಡಿದರು. ಕಾರ್ಯಕ್ರಮವು , ಉತ್ಸಾಹಭರಿತ ವಾತಾವರಣ..
ದಿನಾಂಕ್ :೧೯/೪/೨೬
ಜಿಲ್ಲಾ :ಬೆಳಗಾಂವಿ
ರಿಪೋರ್ಟ್ :ರಾಘವೇಂದ್ರ ಕಲಾಲ್