🔴 ಬ್ರೇಕಿಂಗ್ ನ್ಯೂಸ್ | ಬಿಹಾರದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ
ನಮಸ್ಕಾರ… ನೀವು ಒದುತ್ತಿರುವುದು ನಮ್ಮ ವಿಶೇಷ ಸುದ್ದಿ.ಬಿಹಾರ ರಾಜ್ಯದ ರಾಜಕೀಯದಲ್ಲಿ ದೊಡ್ಡ ಬದಲಾವಣೆ ನಡೆದಿದೆ. ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ಸಮ್ರಾಟ್ ಚೌಧರಿ ಅಧಿಕಾರ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ ನಡೆದ ಎನ್‌ಡಿಎ ಶಾಸಕ ದಳ ಸಭೆಯಲ್ಲಿ ಅವರನ್ನು ಏಕಮತದಿಂದ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಪಟ್ನಾದಲ್ಲಿ ನಡೆದ ವಿಶೇಷ ಸಭೆಯಲ್ಲಿ ಹಿರಿಯ ನಾಯಕರು ಭಾಗವಹಿಸಿದ್ದು, ಸರ್ಕಾರ ರಚನೆ ಹಾಗೂ ಮುಂದಿನ ಆಡಳಿತ ಕ್ರಮಗಳ ಕುರಿತು ಮಹತ್ವದ ಚರ್ಚೆಗಳು ನಡೆದಿವೆ. ಸಭೆಯ ಬಳಿಕ ಸಮ್ರಾಟ್ ಚೌಧರಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು,ಬಿಹಾರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು,ಉದ್ಯೋಗ, ಮೂಲಸೌಕರ್ಯ ಮತ್ತು ಕಾನೂನು ಸುವ್ಯವಸ್ಥೆ ಮೇಲೆ ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ, ಹೊಸ ಮಂತ್ರಿಮಂಡಲ ರಚನೆ ಕುರಿತು ಕೂಡ ಚರ್ಚೆ ನಡೆದಿದ್ದು,ಕೆಲ ದಿನಗಳಲ್ಲಿ ಸಚಿವರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ, ಬಿಹಾರದ ರಾಜಕೀಯದಲ್ಲಿ ಈ ಬೆಳವಣಿಗೆ ದೊಡ್ಡ ತಿರುವು ನೀಡಿದ್ದು,ಹೊಸ ಸರ್ಕಾರದ ಮುಂದಿನ ಕ್ರಮಗಳ ಮೇಲೆ ದೇಶದ ಗಮನ ನೆಟ್ಟಿದೆ.
ಇದು ಬಿಹಾರದಿಂದ ಬಂದ ಇತ್ತೀಚಿನ ಮಾಹಿತಿ.ಇನ್ನಷ್ಟು ಅಪ್ಡೇಟ್ಗಳಿಗಾಗಿ ನಮ್ಮೊಂದಿಗೆ ಇರಿ.
ದಿನಾಂಕ್ :೧೫/೪/೨೬
ಜಿಲ್ಲಾ : ಬೆಳಗಾಂವಿ
ರಿಪೋರ್ಟ್ : ರಾಘವೇಂದ್ರ ಕಲಾಲ್