logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗದಗ ಜಿಲ್ಲೆ ಮುಂಡರಗಿ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿನ ಪಿಯುಸಿ ವಿದ್ಯಾರ್ಥಿಗಳ ಸಾಧನೆ

ಮುಂಡರಗಿ ಸಮಾಜ ಕಲ್ಯಾಣ ಇಲಾಖೆ ಅದೀನದಲ್ಲಿ ಬರುವ ಡಂಬಳ ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇಕಡ ನೂರಕ್ಕೆ ನೂರರಷ್ಟು ಉತ್ತೀರ್ಣರಾಗುವ ಮೂಲಕ ಇಲಾಖೆ ಕೀರ್ತಿ ತಂದಿದ್ದಾರೆ ಇಲ್ಲಿ ಒಟ್ಟು ಎಂಟು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ..

ಮುಂಡರಗಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು ಐದು ಮೆಟ್ರಿಕ್ ನಂತರದ ವಸತಿ ನಿಲಯಗಳಿದ್ದು ಇದರಲ್ಲಿ ಒಟ್ಟು 147 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ 80 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಇಲಾಖೆಗೆ ಕೀರ್ತಿ ತಂದಿರುತ್ತಾರೆ*

ಮುಂಡರಗಿ ಪಟ್ಟಣದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯದಲ್ಲಿ ಒಟ್ಟು 58 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಇದರಲ್ಲಿ 16 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ನಲ್ಲಿ 34 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ

ಮುಂಡರಗಿ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಒಟ್ಟು 53 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ 34 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿರುತ್ತಾರೆ

ಮುಂಡರಗಿ ಪಟ್ಟಣದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ಒಟ್ಟು 16 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ

ಕಲಕೇರಿ ಗ್ರಾಮದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಎಂಟು ವಿದ್ಯಾರ್ಥಿಗಳು ಉತ್ತಿರ್ಣರಾಗಿರುತ್ತಾರೆ..

ಮುಂಡರಗಿ ಪಟ್ಟಣದ ಕಾಲೇಜು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿ ಕುಮಾರಿ ಸುನಿತಾ ಲಮಾಣಿ 578 ಅಂಕಗಳನ್ನು ಪಡೆದು 96.33 ಪ್ರತಿಶತ ಪಡೆಯುವ ಮೂಲಕ ಇಲಾಖೆ ಕೀರ್ತಿ ತಂದಿರುತ್ತಾರೆ ಹಾಗೂ ಕಾಲೇಜು ಬಾಲಕರ ವಸತಿ ನಿಲಯ ಮುಂಡರಗಿಯ ವಿದ್ಯಾರ್ಥಿಯಾದ ಸಂತೋಷ್ ಚೌಹಾಣ್ 576 ಅಂಕಗಳನ್ನು ಪಡೆದು 96 ಪ್ರತಿಶತ ಪಡೆಯುವ ಮೂಲಕ ಇಲಾಖೆ ಕೀರ್ತಿ ತಂದಿರುತ್ತಾನೆ ಈ ಇಬ್ಬರು ವಿದ್ಯಾರ್ಥಿಗಳನ್ನು ಇಲಾಖೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.

ಕೋಚಿಂಗ್ ಕ್ಲಾಸಿಗೆ ಹೋಗಿ ಲಕ್ಷ ಫೀಸ್ ತುಂಬಿ 85 ರಿಂದ 90 ಅಂಕ ಗಳಿಸುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಕೋಚಿಂಗ್ ಇಲ್ಲದೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿದ್ದುಕೊಂಡು ಕಾಲೇಜು ಪಾಠಗಳನ್ನು ಚೆನ್ನಾಗಿ ಓದಿ ಅಭ್ಯಾಸ ಮಾಡಿ ನಮ್ಮ ಇಲಾಖೆಯ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ 80 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದ್ದು ಎಲ್ಲ ವಿದ್ಯಾರ್ಥಿಗಳಿಗೂ ಅವರ ಪಾಲಕರಿಗೂ ಹಾಗೂ ವಸತಿ ನಿಲಯದ ವಾರ್ಡನ್ ರವರಿಗೂ ಸಿಬ್ಬಂದಿಯವರಿಗೂ ಹಾಗೂ ಈ ಎಲ್ಲಾ ವಿದ್ಯಾರ್ಥಿಗಳ ಕಾಲೇಜುಗಳ ಪ್ರಾಂಶುಪಾಲರವರಿಗೆ ಉಪನ್ಯಾಸಕರವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತಾ ವಿದ್ಯಾರ್ಥಿಗಳು ಹೀಗೆ ತಮ್ಮ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಇನ್ನು ಹೆಚ್ಚು ಸಾಧನೆಗಳನ್ನು ಮಾಡುವ ಮೂಲಕ ಅವರ ಹಾಗೂ ಅವರ ಪಾಲಕರ ಕನಸನ್ನು ನನಸಾಗಿಸುವಂಥಾಗಲಿ ಯಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಉದಯಕುಮಾರ ಏಲಿವಾಳರವರು ತಿಳಿಸಿದ್ದಾರೆ

5
100 views

Comment