logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹೊನ್ನೂರು  ದುಗ್ಗಹಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ದುರಸ್ತಿಗೆ ಗ್ರಾಮಸ್ಥರ  ಅಗ್ರಹ.

ಯಳಂದೂರು: ಸಮೀಪದ ಹೊನ್ನೂರು ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಪಕ್ಕದಲಿರುವ ಇರುವ ಸೇತುವೆ ಹಲವಾರು ವರ್ಷಗಳಿಂದ ದುರಸ್ಥಿಯಾಗದೆ ಇರುವುದಕ್ಕೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟ  ನೀರಾವರಿ ಇಲಾಖೆ ಅಧಿಕಾರಿ ವರ್ಗ  ಇದುವರೆಗೂ ಒಮ್ಮೆಯೂ ತಿರುಗಿ ನೋಡಿಲ್ಲ ಈ ಸೇತುವೆ ಹೊನ್ನೂರಿನಿಂದ ದುಗ್ಗಹಟ್ಟಿ, ಅಂಬಳೆ ಮತ್ತು ಯಳಂದೂರುಗೆ ಹಾದು ಹೋಗುವ  ರಸ್ತೆಯಾಗಿದ್ದು   ರೈತರು ಹಾಗೂ ಸಾರ್ವಜನಿಕರು ತಿರುಗಾಡುವ  ಪ್ರಮುಖ ಸೇತುವೆಯಾಗಿರುತ್ತದೆ.

ಈ ಭಾಗದಲ್ಲಿ ಹೊಡಾಡುವ ರೈತರಿಗೆ ತುಂಬಾ ವೇದನೆ ಪಡುತ್ತಿದ್ದಾರೆ,  ರೈತರು ಬೆಳೆದ ಬೆಳೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೆಳೆಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಾಗಿಸುವ   ಸಂಪರ್ಕ ಕಲ್ಪಿಸುವ  ಸೇತುವೆಯಾಗಿದೆ ಎಂದರೆ ತಪ್ಪಾಗಲಾರದು.


  ಕೂಡಲೇ ಸಂಬಂಧ ಪಟ್ಟ  ಸ್ಥಳೀಯಚುನಾಯಿತ  ಪ್ರತಿನಿಧಿಗಳಾಗಲಿ , ಶಾಸಕರಾಗಲಿ   ದುರಸ್ಥಿಗೊಂಡಿರುವ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಅಲ್ಲಿನ ಗ್ರಾಮಸ್ಥರಾದ ಹೊನ್ನೂರು ನಿಂಗರಾಜು ಎಂ,ಪಟೇಲ್ ಅರ್ಜುನ್, ಕೊಂಗಪ್ಪನ ನಾಗಣ್ಣ, ದುಗ್ಗಹಟ್ಟಿ ಸಿದ್ದರಾಜು ಮತ್ತು ಕಪ್ಪಣ್ಣ ಅಗ್ರಹಿಸಿದ್ದಾರೆ.
ವರದಿ:ಹೊನ್ನೂರು ಪರಮೇಶ್

0
12 views

Comment