logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜ್ಞಾನದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಶಾಲೆಗೆ ಬದ್ಧತೆ ಪ್ರಾಮಾಣಿಕತೆ ಇರುವವರು ಪ್ರಾಂಶುಪಾಲರು - M.V. ವಸ್ತ್ರದ.

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಇಂತಹ ವಿಷಮ ಕಾಲಘಟ್ಟದಲ್ಲಿ, ಆದರೆ ಒಬ್ಬ ವ್ಯಕ್ತಿಗೆ ಬದ್ಧತೆ, ಪ್ರಾಮಾಣಿಕತೆ ಏನಾದರೂ ಮಾಡಲೇಬೇಕು ಎಂಬ ಛಲ ಇದ್ದರೆ ಎಂತಹ ಪರಿಸ್ಥಿತಿಯನ್ನು ಬದಲಾಯಿಸಬಹುದು, ಮರುಭೂಮಿಯನ್ನು ಕೂಡ ದಟ್ಟ ಹಸಿರ ಕಾಡಾಗಾಸಿಬಹುದು ಎನ್ನುವುದಕ್ಕೆ ನನ್ನ ಸ್ನೇಹಿತರಾದ M.V ವಸ್ತ್ರದ ಉದಾಹರಣೆ ಯಾಗಿ ನಿಲ್ಲುತ್ತಾರೆ ಎಂದು ನಾನು ಹೆಮ್ಮೆಯಿಂದ ಹೇಳಬಹುದು.ಏಕೆಂದರೆ ಶಿಕ್ಷಕ ಎನ್ನುವುದು ಬರಿ ಸಂಬಳ ಪಡೆಯುವ ವೃತ್ತಿಯಲ್ಲ ಅದೊಂದು ಕರ್ತವ್ಯ, ಬದ್ಧತೆ, ಸಂಸ್ಕೃತಿ ಹಾಗೂ ಈ ನೆಲದ ಪರಂಪರೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಸುವ ಸೇತುವೆ ಎಂದರೆ ತಪ್ಪಾಗಲಾರದು.
ಅಂಭೆಡ್ಕರ್ ವಸತಿ ಶಾಲೆ ಅಲ್ಲಿ ಯಾವುದೋ ಗುಡ್ಡದ ಕೆಳಗೆ ಯಾವುದೇ ಸೌಲಭ್ಯ ಇಲ್ಲದಿದ್ದರೂ ಕೂಡ ನಿನ್ನೆ SSLC ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರೂ ಅದಕ್ಕೆ ನನ್ನನ್ನು ಅತಿಥಿಯಾಗಿ ಬರಬೇಕು ಎಂದು ಕಳೆದ ಎರಡು ವರ್ಷದಿಂದ ಕರೆದರೂ ಕೂಡ ನನಗೆ ಹೋಗಲು ಆಗಿರಲಿಲ್ಲ ಆದರೆ ಈ ಸಲ ಹೋಗಬೇಕು ಎಂದು ಧೃಡ ನಿರ್ಧಾರ ಮಾಡಿ ಹೋಗಿದ್ದೆ. ಎಂಥಹ ಅದ್ಭುತ ಕಾರ್ಯಕ್ರಮ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ್ದಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಯೊಂದು ಕಾರ್ಯಕ್ರಮ ತುಂಬಾ ಅರ್ಥ ಗರ್ಭಿತವಾಗಿತ್ತು. ಕೇವಲ 25 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 250 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಖುಷಿಯ ವಿಚಾರ. ಅದರ ಹಿಂದೆ ವಸ್ತ್ರದ ಹಾಗೂ ಅವರ ಶಿಕ್ಷಕರ ಸಿಬ್ಬಂದಿಯ ಪರಿಶ್ರಮವಿದೆ ಎಂದರೆ ತಪ್ಪಾಗಲಾರದು.
ಕಾರ್ಯಕ್ರಮದಲ್ಲಿ ನನಗೆ ಬಹಳ ಗಮನ ಸೆಳೆದದ್ದು ತಂದೆತಾಯಂದಿರುಗಳಿಗೆ ಮಕ್ಕಳಿಂದ ಪಾದಪೂಜೆ ಮಾಡಿಸುವುದು. ಆ ಶಾಲೆಯಲ್ಲಿ ಬರುವವರು ಪಾವಗಡ, ಕೊರಟಗೆರೆ, ಕಡೆಯ ಬಡವರ ಮಕ್ಕಳು. ಅಂತಹ ಮಕ್ಕಳನ್ನು ಶಿಲೆಯಾಗಿಸಿ ಜ್ಞಾನವನ್ನು ತಲೆಗೆ ತುಂಬಿಸಿವುದು ಎಂದರೆ ಅದಕ್ಕೆ ಬಹಳ ಸಹನೆ ಬದ್ಧತೆ ಬೇಕು. ಎಲ್ಲಾ SSLC ವಿದ್ಯಾರ್ಥಿಗಳಿಗೆ ಒಂದೊಂದು ಗ್ರೂಪ್ ಫೋಟೋ ಉಡುಗೊರೆಯಾಗಿ ನೀಡಿರುವುದುನ್ನು ನೋಡಿ ನನ್ನ ಬಾಲ್ಯ ನೆನಪಾಯಿತು ನಾವು ಆವಾಗ ಒಂದು ಫೋಟೋ ಕೊಳ್ಳಲು ಕೂಡ ಪರದಾಡುತ್ತಿದ್ದೆವು. ಹಾಗೂ ಎಲ್ಲಾ ಪಾಲಕರಿಗೂ, ಶಿಕ್ಷಕರಿಗೂ, ಅಡುಗೆ ಸಿಬ್ಬಂದಿಗು ಸನ್ಮಾನ ಮಾಡಲಾಯಿತು. ನಿಜಕ್ಕೂ ಒಬ್ಬ ವ್ಯಕ್ತಿಯನ್ನು ನಾಯಕ ನನ್ನಾಗಿಸುವುದು ಈ ತರಹದ ಗುಣಗಳು.ತನ್ನ ಗೆಲವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು.
ಇನ್ನೊಂದು ಖುಷಿಯ ವಿಚಾರವನ್ನು ನಾನಿಲ್ಲಿ ಹಂಚಿಕೊಳ್ಳಬೇಕು ಕಳೆದ ಎರಡು ವರ್ಷದಿಂದ ಈ ಅಂಭೆಡ್ಕರ್ ವಸತಿ ಶಾಲೆಯ SSLC ಪರೀಕ್ಷೆಯ ಫಲಿತಾಂಶ ನೂರಕ್ಕೆ ನೂರು ಇದೆ. ಅದಕ್ಕೆ ಅಲ್ಲಿಯ ಶಿಕ್ಷಕ ಸಿಬ್ಬಂದಿ ರಾತ್ರಿ ಕೂಡ ಅಲ್ಲಿಯೇ ಇದ್ದು ಮಕ್ಕಳಿಗೆ ಓದಿಸುತ್ತಾರೆ ಅದಕ್ಕೆ ಶಾಲೆಯ ಪ್ರಾಂಶುಪಾಲರ ಪ್ರೋತ್ಸಾಹ ಕೂಡ ಇದಕ್ಕೆ ಕಾರಣ ಒಟ್ಟಾರೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ನಿರೂಪಿಸಿದ್ದಾರೆ. ಬರಿ ಓದುವುದಲ್ಲ ಮಕ್ಕಳಿಗೆ ಕ್ರೀಡೆ, ಸಾಂಸ್ಕೃತಿಕ, ಕಲೆ ಇತರ ಚುಟುವಟಿಕೆಯಲ್ಲಿ ಅವರ ಪ್ರತಿಭೆ ಅನಾವರಣಗೊಳ್ಳಲು ವೇದಿಕೆಯನ್ನು ಕಲ್ಪಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಬಹುಷಃ ನಮ್ಮ ಹಿರಿಯರು ಶಾಲೆ ಎಂದರೆ ಹೇಗೆ ಇರಬೇಕು ಎಂದಿದ್ದರೋ ಅದಕ್ಕೆ ಈ ಅಂಭೆಡ್ಕರ ವಸತಿ ಶಾಲೆಯ ಉದಾಹರಣೆ ಕೊಡಬಹುದು.
ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಇತಿಹಾಸ ಪುಟ ಸೇರುತ್ತಿವೆ ಎನ್ನುವ ಈ ದುರಂತದ ಸಂಧರ್ಭದಲ್ಲಿ ಪಾಲಕರ ನಂಬಿಕೆಯನ್ನು ಇಮ್ಮಡಿಗೊಳಿಸಿ ನಿರ್ಭತಿಯಿಂದ ಸರ್ಕಾರಿ ಶಾಲೆಗೆ ಸೇರಿಸಬೇಕು ಎನ್ನುವಷ್ಟರ ಮಟ್ಟಿಗೆ ಈ ಶಾಲೆ ನಂಬಿಕೆಯನ್ನು, ಅಭಿವೃದ್ಧಿಯನ್ನು ಹೊಂದಿದೆ.
ಇಂತಹ ಸುಂದರ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸಿದ್ದದಕ್ಕೆ ಮತ್ತು ನಾನೇನು ಸಾಧನೆ ಮಾಡಿಲ್ಲದಿದ್ದರೂ ನನಗೆ ಸನ್ಮಾನಿಸಿ ಮುಂದೆ ಸಾಧನೆ ಮಾಡಿ ಎಂದು ಸ್ಫೂರ್ತಿ ತುಂಬಿದ್ದಕ್ಕೆ ನನ್ನ ಸ್ನೇಹಿತರಾದ ಅಂಭೆಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ವಸ್ತ್ರದ ಸರ್ ಹಾಗೂ ಸಿಬ್ಬಂದಿಗೆ ತುಂಬು ಹೃದಯದ ಧನ್ಯವಾದಗಳು.
ಕೊನೆಯದಾಗಿ ಹೇಳಬೇಕು ಎಂದರೆ ಊಟ ಯಾವ ಶ್ರೀಮಂತರ ಮದುವೆ ಊಟಕ್ಕಿಂತ ಕಮ್ಮಿಯಿರಲಿಲ್ಲ ಎಂದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಹೇಳುತ್ತಿದ್ದರು.
ಶಾಲೆಯೂ ಇನ್ನಷ್ಟು ಅಭಿವೃದ್ಧಿ ಹೊಂದಲಿ ಹಾಗೂ ನನ್ನ ಸ್ನೇಹಿತರಾದ ಮುದುಕಯ್ಯ ವಸ್ತ್ರದ ಅವರ ವೃತ್ತಿ ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.
ಸರ್ಕಾರಿ ಶಾಲೆಗಳು ಮುಚ್ಚುವ ಈ ಕಾಲಘಟ್ಟದಲ್ಲಿ ಇಂತಹ ಬೆಳವಣಿಗೆಗಳು ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆಯನ್ನು ಹುಟ್ಟಿಸಿ ಮಕ್ಕಳ ದಾಖಲಾತಿ ಹೆಚ್ಚಾಗುವ ಆಶಾಭಾವನೆಯಿದೆ. ಇಂತಹ ಪ್ರಾಮಾಣಿಕ ಪ್ರಯತ್ನಕ್ಕೆ ಸಮಾಜ ಹಾಗೂ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಮತ್ತು ಇಂತಹ ಅತ್ಯುತ್ತಮ ಕಾರ್ಯಕ್ರಮಕ್ಕೆ ಹೆಚ್ಚೆಚ್ಚು ಪ್ರಚಾರ ಸಿಕ್ಕಬೇಕು ಅಂದಾಗಲೇ ಸಮಾಜದಲ್ಲಿ ಒಂದಿಷ್ಟು ಸುಧಾರಣೆ ತರಬಹುದು.
ಕರ್ನಾಟಕ ಸರ್ಕಾರ ನಿದ್ದೆಯಿಂದ ಎದ್ದು ಸರ್ಕಾರಿ ಶಾಲೆಗಳು ಉಳಿಸುವಲ್ಲಿ ಹೆಚ್ಚು ಗಮನ ಹರಿಸಬೇಕು.

0
0 views

Comment